ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಮ್ರಾನ್‌ ಪತ್ನಿಗೆ ಶೌಚಾಲಯ ಸ್ವಚ್ಛಗೊಳಿಸುವ ದ್ರಾವಣ ಮಿಶ್ರಣದ ಆಹಾರ: ಆರೋಪ

Published 25 ಏಪ್ರಿಲ್ 2024, 14:23 IST
Last Updated 25 ಏಪ್ರಿಲ್ 2024, 14:23 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಪತ್ನಿ ಬುಶ್ರಾ ಬೀಬಿ ಅವರಿಗೆ ಇಫ್ತಾರ್‌ ಊಟದಲ್ಲಿ ಕನಿಷ್ಠ 2ರಿಂದ 3 ಹನಿಯಷ್ಟು ಶೌಚಾಲಯ ಸ್ವಚ್ಛಗೊಳಿಸುವ ದ್ರಾವಣವನ್ನು ಮಿಶ್ರಣ ಮಾಡಿ ಕೊಡಲಾಗಿತ್ತು ಎಂದು ಬೀಬಿ ಅವರ ವಕ್ತಾರರು ಗುರುವಾರ ಆರೋಪಿಸಿದ್ದಾರೆ. 

‘ಫೆಬ್ರುವರಿ 24ರಂದು ನಡೆದ ಶಬ್‌– ಇ –ಬರಾತ್‌ ವೇಳೆ ಊಟದಲ್ಲಿ ಈ ದ್ರಾವಣವನ್ನು ಮಿಶ್ರಣ ಮಾಡಲಾಗಿದೆ. ಬುಶ್ರಾ ಬೀಬಿಯ ಇಫ್ತಾರ್ ಊಟಕ್ಕೆ ಎರಡು ಅಥವಾ ಮೂರು ಹನಿ ಶೌಚಾಲಯ ಸ್ವಚ್ಛಗೊಳಿಸುವ ದ್ರಾವಣ ಸೇರಿಸಿರುವುದು ನಮ್ಮ ಗಮನಕ್ಕೆ ಬಂದಿದೆ’ ಎಂದು ಬುಶ್ರಾ ಬೀಬಿಯ ವಕ್ತಾರ ಮಶಾಲ್ ಯೂಸಫ್‌ಜೈ ನೀಡಿರುವ ಹೇಳಿಕೆ ಉಲ್ಲೇಖಿಸಿ ‘ಜಿಯೋ’ ಸುದ್ದಿ ಸಂಸ್ಥೆ ವರದಿ ಮಾಡಿದೆ. 

ಬುಶ್ರಾ ಬಂಧನಕ್ಕೂ ಮುನ್ನ ಆಕೆಗೆ ರಕ್ತದೊತ್ತಡ, ಮಧುಮೇಹ ಸೇರಿ ಯಾವುದೇ ಸಮಸ್ಯೆ ಇರಲಿಲ್ಲ. ಇಫ್ತಾರ್‌ ಊಟ ಸೇವಿಸಿದ ನಂತರ ಬುಶ್ರಾ ಅವರ ಆರೋಗ್ಯ ದಿನೇ ದಿನೇ ಹದಗೆಡುತ್ತಿದೆ ಎಂದು ಅವರ ವಕ್ತಾರರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT