ದುಬೈ: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಮೂಲಕ ಪತಿಗೆ ವಿಚ್ಛೇದನ ನೀಡಿದ್ದ ದುಬೈ ರಾಜಕುಮಾರಿ ಶೈಖಾ ಮೆಹ್ರಾ ಅಲ್ ಮುಕ್ತಮ್ ಅವರು ಮೆಹ್ರಾ ಎಂ1 ಬ್ರ್ಯಾಂಡ್‌ನ ಅಡಿಯಲ್ಲಿ ‘ಡಿವೋರ್ಸ್’ ಹೆಸರಿನ ‘ಪರ್ಫ್ಯೂಮ್’ ಅನ್ನು ಬಿಡುಗಡೆ ಮಾಡುವುದಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ‘ಡಿವೋರ್ಸ್’ ಎಂದು ಬರೆದಿರುವ ಕಪ್ಪು ಬಾಟಲಿಯ ಚಿತ್ರವನ್ನು ಶೇರ್ ಮಾಡಿಕೊಂಡಿರುವ ಮೆಹ್ರಾ ಅವರು, ಕೆಲವು ದಿನಗಳ ಹಿಂದೆ ವಿಡಿಯೊವೊಂದನ್ನು ಹಂಚಿಕೊಂಡಿದ್ದರು.
ಮೆಹ್ರಾ ಅವರ ಪೋಸ್ಟ್‌ಗೆ ಹಲವರು ಕಾಮೆಂಟ್ ಮಾಡಿದ್ದು, ‘ತುಂಬಾ ವಿಭಿನ್ನವಾಗಿದೆ’ ಎಂದಿದ್ದಾರೆ.
ಕೆಲವು ತಿಂಗಳ ಹಿಂದೆ ಮೆಹ್ರಾ ಅವರು ಇನ್‌ಸ್ಟಾಗ್ರಾನಲ್ಲಿಯೇ ಪತಿ ಶೇಖ್ ಮನಾ ಬಿನ್ ಮೊಹಮ್ಮದ್ ಬಿನ್ ರಶೀದ್ ಬಿನ್ ಮನಾ ಅಲ್ ಮುಕ್ತಮ್ ಅವರಿಗೆ ವಿಚ್ಛೇದನ ನೀಡಿದ್ದರು. ಪ್ರೀತಿಯ ಪತಿ, ನಿಮ್ಮನ್ನು ಬೇರೊಬ್ಬ ಸಂಗಾತಿ ಆವರಿಸಿದ್ದರಿಂದ ನಾನು ನಿಮಗೆ ವಿಚ್ಛೇದನವನ್ನು ನೀಡುತ್ತಿದ್ದೇನೆ’ ಎಂದು ತ್ರಿವಳಿ ತಲಾಖ್ ನೀಡಿದ್ದರು. ಈ ಸುದ್ದಿ ಜಗತ್ತಿನಾದ್ಯಂತ ಸದ್ದು ಮಾಡಿತ್ತು. ದುಬೈ ರಾಜನ ಮಗಳ ನಡೆಗೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದರು.