ಕಿನ್ಶಾಸಾ: ‘ಎಬೋಲಾವನ್ನು ಸೋಲಿಸಲಾಗಿದೆ. ಈ ಮಾರಣಾಂತಿಕ ಸೋಂಕನ್ನು ಲಸಿಕೆಗಳು ಮತ್ತು ವೈದ್ಯಕೀಯ ಚಿಕಿತ್ಸೆ ಮೂಲಕ ನಿಯಂತ್ರಣಕ್ಕೆ ತರಲಾಗಿದೆ’ ಎಂದು 40 ವರ್ಷಗಳ ಹಿಂದೆ ಎಬೋಲಾ ವೈರಾಣುವನ್ನು ಮೊದಲು ಪತ್ತೆ ಹಚ್ಚಿದ ಕಾಂಗೊ ಪ್ರಾಧ್ಯಾಪಕ ಜೀನ್–ಜಾಕ್ವೆಸ್ ಮುಯೆಂಬೆ ಹೇಳಿದರು.

‘ಎಬಂಗಾ’ ಚಿಕಿತ್ಸೆಯು ಮಾರುಕಟ್ಟೆಗೆ ಆಗಮಿಸಿದ್ದು, ಈ ಹಿನ್ನೆಲೆಯಲ್ಲಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊದ ರಾಜಧಾನಿ ಕಿನ್ಶಾಸಾದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಜೀನ್–ಜಾಕ್ವೆಸ್ ಮಾತನಾಡಿದರು. ಕಳೆದ ವರ್ಷ ಡಿಸೆಂಬರ್ನಲ್ಲಿ ಅಮೆರಿಕದ ಆಹಾರ ಮತ್ತು ಔಷಧಿ ಆಡಳಿತವು ಎಬಂಗಾ ಚಿಕಿತ್ಸೆಗೆ ಅನುಮೋದನೆ ನೀಡಿತ್ತು.

‘ಕಳೆದ 40 ವರ್ಷಗಳಿಂದ ನಾನುಈ ಮಾರಣಾಂತಿಕ ಮತ್ತು ಭಯಾನಕ ರೋಗದ ವಿರುದ್ಧದ ಹೋರಾಟಕ್ಕೆ ಸಾಕ್ಷಿಯಾಗಿದ್ದೇನೆ. ಸದ್ಯ ಈ ಸೋಂಕನ್ನು ಸೋಲಿಸಲಾಗಿದೆ. ಇದನ್ನು ತಡೆಯಬಹುದು ಮತ್ತು ಗುಣಪಡಿಸಬಹುದು ಎಂಬುದನ್ನು ನಾನು ಹೇಳಬಲ್ಲೆ’ ಎಂದು ಅವರು ತಿಳಿಸಿದರು.

‘ಎಬಂಗಾ’ವು ಎಬೋಲಾ ವೈರಾಣು ಜೀವಕೋಶವನ್ನು ಪ್ರವೇಶಿಸದಂತೆ ತಡೆಯುತ್ತದೆ ಮತ್ತು ಪ್ರಾಣ ಅಪಾಯವನ್ನು ಕಡಿಮೆಗೊಳಿಸುತ್ತದೆ. ಈ ವೈರಾಣುವಿನ ಬಗ್ಗೆ ಅಮೆರಿಕದಲ್ಲಿ ಮುಯೆಂಬೆ ಅವರೊಂದಿಗೆ ಸೇರಿ ಸಂಶೋಧನೆ ನಡೆಸಲಾಗುತ್ತಿದೆ’ ಎಂದು ಅಮೆರಿಕದ ಜೀವಶಾಸ್ತ್ರಜ್ಞೆ ನಾನ್ಸಿ ಸುಲ್ಲಿವಾನ್ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.