ನ್ಯೂಯಾರ್ಕ್: ಸ್ಪೇಸ್ಎಕ್ಸ್, ಟೆಸ್ಲಾ, ಎಕ್ಸ್ ಹೀಗೆ ಹಲವು ಸಂಸ್ಥೆಗಳ ಸಂಸ್ಥಾಪಕ ಇಲಾನ್ ಮಸ್ಕ್ ಅವರ ಈಗಿನ ಸಂಗಾತಿ ಭಾರತೀಯ ಮೂಲದ ಶವೋನ್ ಝಿಲಿಸ್. ಇವರಿಗೆ ಜನಿಸಿದ ಮಗನಿಗೆ ಶೇಖರ್ ಎಂದು ಹೆಸರು ಇಟ್ಟಿರುವುದಾಗಿ ಮಸ್ಕ್ ವಿಷಯ ಹಂಚಿಕೊಂಡಿದ್ದಾರೆ.

ಹೂಡಿಕೆಯ ಆ್ಯಪ್ ಝೆರೊದಾ ಸಂಸ್ಥಾಪಕ ನಿಖಿಲ್ ಕಾಮತ್ ಅವರ ‘ಪೀಪಲ್ ಬೈ ಡಬ್ಲೂಟಿಎಫ್’ ಎಂಬ ಕಾರ್ಯಕ್ರಮದಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡಿರುವ ಮಸ್ಕ್, ತಮ್ಮ ಹೊಸ ಕುಟುಂಬದ ವಿಷಯವನ್ನೂ ಪ್ರಸ್ತಾಪಿಸಿದ್ದಾರೆ.

ಮಸ್ಕ್ ಹಾಗೂ ಶಿವೋನ್ ಅವರಿಗೆ ಜನಿಸಿದ ಪುತ್ರನಿಗೆ ನೋಬೆಲ್ ಪ್ರಶಸ್ತಿ ವಿಜೇತ ಭೌತವಿಜ್ಞಾನಿ ಡಾ. ಸುಬ್ರಮಣ್ಯನ್ ಚಂದ್ರಶೇಖರ್ ಅವರ ಹೆಸರು ಇಟ್ಟಿರುವುದಾಗಿ ಹೇಳಿದ್ದಾರೆ.

ಸುಬ್ರಮಣ್ಯನ್ ಚಂದ್ರಶೇಖರ್ ಅವರು ಅಮೆರಿಕದಲ್ಲಿ ನೆಲೆಸಿದ್ದ ಭಾರತೀಯ ಮೂಲದ ಖಗೋಳ ಭೌತವಿಜ್ಞಾನಿ. ನಕ್ಷತ್ರಗಳ ರಚನೆ ಹಾಗೂ ವಿಕಾಸಕ್ಕೆ ಸಂಬಂಧಿಸಿದಂತೆ ಅವರ ಸಿದ್ಧಾಂತ ಹೆಚ್ಚು ಮನ್ನಣೆ ಪಡೆದುಕೊಂಡಿತ್ತು. ಇದಕ್ಕಾಗಿ ಇವರಿಗೆ 1983ರಲ್ಲಿ ನೋಬೆಲ್ ಪ್ರಶಸ್ತಿ ಲಭಿಸಿತ್ತು. ಹೀಗಾಗಿ ಅವರ ಹೆಸರನ್ನು ಮಗನ ಮಧ್ಯದ ಹೆಸರನ್ನಾಗಿ ಇಡಲಾಗಿದೆ ಎಂದಿದ್ದಾರೆ.

ಸಂಗಾತಿ ಶಿವೋನ್ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಸ್ಕ್, ‘ಮಗುವಾಗಿರುವಾಗಲೇ ಕೆನಡಾದ ದಂಪತಿ ಶಿವೋನ್ ಅವರನ್ನು ದತ್ತು ಪಡೆದಿದ್ದರು. ಅವರ ತಂದೆ ವಿಶ್ವವಿದ್ಯಾಲಯದಲ್ಲಿದ್ದರು ಎಂಬುದಷ್ಟೇ ಗೊತ್ತು. ಆದರೆ ಹೆಚ್ಚಿನ ವಿವರಗಳ ಕುರಿತು ಸ್ಪಷ್ಟತೆ ಇಲ್ಲ’ ಎಂದಿದ್ದಾರೆ.

ಶಿವೋನ್ ಅವರೊಂದಿಗೆ ಮಸ್ಕ್ ನಾಲ್ಕು ಮಕ್ಕಳನ್ನು ಹೊಂದಿದ್ದಾರೆ. ಅದರಲ್ಲಿ ಅವಳಿ ಸ್ಟ್ರೈಡರ್ ಮತ್ತು ಅಝೂರ್, ಪುತ್ರಿ ಅರ್ಕಾಡಿಯಾ ಮತ್ತು ಪುತ್ರ ಶೆಲ್ಡನ್ ಶೇಖರ್ ಲೈಕರ್ಗಸ್ ಇದ್ದಾರೆ. ಶಿವೋನ್ ಅವರು ಮಸ್ಕ್ ಅವರಿಗೆ ಸೇರಿದ ನ್ಯೂರಾಲಿಂಕ್ನಲ್ಲಿ ಕಾರ್ಯಾಚರಣೆ ಮತ್ತು ವಿಶೇಷ ಯೋಜನೆಗಳ ನಿರ್ದೇಶಕಿಯಾಗಿದ್ದಾರೆ.

ಇಲಾನ್ ಮಸ್ಕ್ ಅವರಿಗೆ ಒಟ್ಟು ನಾಲ್ವರು ಸಂಗಾತಿಗಳು ಹಾಗೂ 14 ಮಕ್ಕಳಿದ್ದಾರೆ. ಮೊದಲ ಪತ್ನಿ ಜಸ್ಟನ್ ವಿಲ್ಸನ್ ಅವರಿಂದ ಆರು ಮಕ್ಕಳು, ಎರಡನೆಯವರಾದ ಮಾಜಿ ಗೆಳತಿ ಗ್ರಿಮ್ಸ್ ಅವರಿಂದ ಮೂವರು ಮತ್ತು ಶಿವೋನ್ ಅವರಿಂದ ನಾಲ್ಕು ಮಕ್ಕಳನ್ನು ಹಾಗೂ ಆಶ್ಲೇ ಕ್ಲೈರ್ ಅವರಿಂದ ಒಂದು ಮಗುವನ್ನು ಹೊಂದಿದ್ದಾರೆ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.