ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅತ್ಯುತ್ತಮ ಕಾರ್ಬನ್ ಕ್ಯಾಪ್ಚರ್ ಟೆಕ್‌: 10 ಕೋಟಿ ಬಹುಮಾನ ಘೋಷಿಸಿದ ಇಲಾನ್ ಮಸ್ಕ್

ಫಾಲೋ ಮಾಡಿ
Comments

ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಸೆರೆಹಿಡಿಯಲು "ಅತ್ಯುತ್ತಮ" ತಂತ್ರಜ್ಞಾನದ ಅಭಿವೃದ್ಧಿಗಾಗಿ ಟೆಸ್ಲಾ ಐಎನ್‌ಸಿ ಮುಖ್ಯಸ್ಥ ಮತ್ತು ಬಿಲಿಯನೇರ್ ಉದ್ಯಮಿ ಇಲಾನ್ ಮಸ್ಕ್ ಗುರುವಾರ 100 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಟ್ವೀಟ್ ಮಾಡಿದ್ದಾರೆ.

ಗ್ರಹ-ತಾಪಮಾನ ಹೊರಸೂಸುವಿಕೆಯನ್ನು ಸೆರೆಹಿಡಿಯುವುದು ಹವಾಮಾನ ಬದಲಾವಣೆಯನ್ನು ನಿಯಂತ್ರಿಸುವ ಅನೇಕ ಯೋಜನೆಗಳ ನಿರ್ಣಾಯಕ ಭಾಗವಾಗುತ್ತಿದೆ, ಆದರೆ, ಈವರೆಗೂ ಈ ಕುರಿತ ತಂತ್ರಜ್ಞಾನದ ಮೇಲೆ ತೀರಾ ಕಡಿಮೆ ಪ್ರಗತಿಯನ್ನು ಸಾಧಿಸಲಾಗಿದೆ. ಇಂಗಾಲವನ್ನು ಗಾಳಿಯಿಂದ ಹೊರತೆಗೆಯುವ ಬದಲು ಹೊರಸೂಸುವಿಕೆಯನ್ನು ಕಡಿತಗೊಳಿಸುವತ್ತ ಮಾತ್ರ ಗಮನ ಹರಿಸಲಾಗಿದೆ.

ದೇಶಗಳು ನಿವ್ವಳ-ಶೂನ್ಯ ಹೊರಸೂಸುವಿಕೆ ಗುರಿಗಳನ್ನು ತಲುಪಬೇಕಾದರೆ ಗಾಳಿಯಲ್ಲಿರುವ ಇಂಗಾಲವನ್ನು ಸೆರೆಹಿಡಿಯುವ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ತೀವ್ರ ಏರಿಕೆ ಸಾಧಿಸುವುದು ಅಗತ್ಯವಾಗಿದೆ ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ ಕಳೆದ ವರ್ಷದ ಕೊನೆಯಲ್ಲಿ ಹೇಳಿದೆ.

'ಅತ್ಯುತ್ತಮ ಕಾರ್ಬನ್ ಸೆರೆಹಿಡಿಯುವ ತಂತ್ರಜ್ಞಾನಕ್ಕೆ ನೀಡುವ ಅಭಿವೃದ್ಧಿಗೆ ಬಹುಮಾನಕ್ಕಾಗಿ 100 ಮಿಲಿಯನ್ ಡಾಲರ್ ದೇಣಿಗೆ ನೀಡುತ್ತಿದ್ದೇನೆ' ಎಂದು ಮಸ್ಕ್ ಟ್ವೀಟಿನಲ್ಲಿ ಬರೆದಿದ್ದಾರೆ. ನಂತರ ಎರಡನೇ ಟ್ವೀಟ್‌ನಲ್ಲಿ 'ವಿವರಗಳು ಮುಂದಿನ ವಾರ' ಎಂದು ಭರವಸೆ ನೀಡಿದ್ದಾರೆ.

ಈ ಕುರಿತು ಹೆಚ್ಚುವರಿ ಮಾಹಿತಿ ನೀಡುವಂತೆ ಸಂಪರ್ಕಿಸಿದ ಟೆಸ್ಲಾ ಅಧಿಕಾರಿಗಳು ತಕ್ಷಣ ಸ್ಪಂದಿಸಿಲ್ಲ.
ಸಹ ಸಂಸ್ಥಾಪಕ ಮತ್ತು ಇಂಟರ್ನೆಟ್ ಪಾವತಿ ಕಂಪನಿ ಪೇಪಾಲ್ ಹೋಲ್ಡಿಂಗ್ಸ್ ಐಎನ್‌ಸಿಯನ್ನು ಮಾರಾಟ ಮಾಡಿದ ಮಸ್ಕ್, ಈಗ ವಿಶ್ವದ ಕೆಲವು ಭವಿಷ್ಯದ ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ.

ವಿಶ್ವದ ಎರಡನೇ ಸಿರಿವಂತ ಉದ್ಯಮಿ ಇಲಾನ್ ಮಸ್ಕ್ ಭಾರತದ ಬ್ಯಾಟರಿ ಚಾಲಿತ ಕಾರು ಮಾರುಕಟ್ಟೆ ಪ್ರವೇಶಿಸುವುದು ಕೊನೆಗೂ ಖಚಿತಪಟ್ಟಿದೆ. ಇದೇ ಜನವರಿ 8ರಂದು ಭಾರತದಲ್ಲಿ ಟೆಸ್ಲಾ ಕಾರು ಕಂಪನಿ ನೋಂದಣಿ ಆಗಿದೆ. ₹1 ಲಕ್ಷ ಆರಂಭಿಕ ಶುಲ್ಕದೊಂದಿಗೆ ‘ಟೆಸ್ಲಾ ಇಂಡಿಯಾ ಮೋಟಾರ್ ಅಂಡ್ ಎನರ್ಜಿ ಪ್ರೈವೇಟ್ ಲಿಮಿಟೆಡ್’ ಹೆಸರಿನಲ್ಲಿ ಕಂಪನಿ ನೋಂದಣಿಯಾಗಿದ್ದು, ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿ ಕಾರ್ಪೊರೇಟ್ ಕಚೇರಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT