ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಬಂಧಗಳು ರಷ್ಯಾದ ಆರ್ಥಿಕತೆ ಕುಸಿತಕ್ಕೆ ಕಾರಣವಾಗುತ್ತವೆ: ಫ್ರಾನ್ಸ್

Last Updated 1 ಮಾರ್ಚ್ 2022, 10:42 IST
ಅಕ್ಷರ ಗಾತ್ರ

ಪ್ಯಾರಿಸ್: ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ ದೇಶಗಳು ವಿಧಿಸಿರುವ ನಿರ್ಬಂಧ ರಷ್ಯಾದ ಆರ್ಥಿಕತೆ ಕುಸಿತಕ್ಕೆ ಕಾರಣವಾಗುತ್ತದೆ ಎಂದು ಫ್ರಾನ್ಸ್ ಮಂಗಳವಾರ ಹೇಳಿದೆ.

ರಷ್ಯಾ ಮೇಲೆ ಹೊಸ ನಿರ್ಬಂಧಗಳನ್ನು ವಿಧಿಸುವುದಾಗಿ ಫ್ರಾನ್ಸ್, ಐರೋಪ್ಯ ಒಕ್ಕೂಟ ಮತ್ತು ಇತರೆ ದೇಶಗಳು ಹೇಳಿಕೆ ನೀಡಿವೆ. ಇದಾದ ಒಂದು ದಿನದ ನಂತರ, 'ನಾವು ರಷ್ಯಾದ ಆರ್ಥಿಕತೆಯು ಕುಸಿಯುವಂತೆ ಮಾಡುತ್ತೇವೆ' ಎಂದು ಫ್ರಾನ್ಸ್ ಹಣಕಾಸು ಸಚಿವ ಬ್ರೂನೊ ಲೆ ಮೈರ್ ಫ್ರಾನ್ಸ್‌ಇನ್ಫೋ ಬ್ರಾಡ್‌ಕಾಸ್ಟರ್‌ಗೆ ತಿಳಿಸಿದರು.

'ಆರ್ಥಿಕ ಮತ್ತು ಹಣಕಾಸಿನ ಸಮತೋಲನವು ತನ್ನ ಸ್ವಂತ ಆರ್ಥಿಕ ಶಕ್ತಿಯನ್ನು ಕಂಡುಕೊಳ್ಳುವ ಪ್ರಕ್ರಿಯೆಯಲ್ಲಿರುವ ಯುರೋಪಿಯನ್ ಒಕ್ಕೂಟದ ಪರವಾಗಿದೆ. ನಾವು ರಷ್ಯಾದ ಮೇಲೆ ಸಂಪೂರ್ಣ ಆರ್ಥಿಕ ಮತ್ತು ಹಣಕಾಸಿನ ಯುದ್ಧವನ್ನು ನಡೆಸುತ್ತಿದ್ದೇವೆ' ಎಂದು ಅವರು ಹೇಳಿದರು.

'ಸುಮಾರು 1,000 ಶತಕೋಟಿ ಡಾಲರ್ ರಷ್ಯಾದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ರಷ್ಯಾದ ಕೇಂದ್ರ ಬ್ಯಾಂಕ್ ಸೋಮವಾರ ತನ್ನ ಪ್ರಮುಖ ಬಡ್ಡಿದರವನ್ನು ಶೇ 20 ಕ್ಕೆ ಹೆಚ್ಚಿಸಿದ ನಂತರ, 'ಕಂಪನಿಗಳು ಹೆಚ್ಚಿನ ದರಗಳಲ್ಲಿ ಮಾತ್ರ ಸಾಲ ಪಡೆಯುವಂತಾಗಿದೆ' ಎಂದು ತಿಳಿಸಿದರು.

'ಈ ನಿರ್ಬಂಧಗಳಿಂದಾಗಿ ರಷ್ಯಾದ ಸಾಮಾನ್ಯ ಜನರು ಸಹ ತೊಂದರೆ ಅನುಭವಿಸುವಂತಾಗಿದೆ. 'ಇದನ್ನ ಹೇಗೆ ನಿಭಾಯಿಸುತ್ತೇವೆ ಎಂಬುದು ನಮಗೆ ತಿಳಿದಿಲ್ಲ'. ಮುಂಬರುವ ದಿನಗಳಲ್ಲಿ ರಷ್ಯಾದ ಇಂಧನ ಯೋಜನೆಗಳ ಸಹಭಾಗಿತ್ವದ ಕುರಿತು ನಿರ್ಧರಿಸಲು ಫ್ರಾನ್ಸ್‌ನ ಎರಡು ದೈತ್ಯ ಇಂಧನ ಕಂಪನಿಗಳಾದ ಟೋಟಲ್ ಎನರ್ಜಿಸ್ ಮತ್ತು Engie ಯೊಂದಿಗೆ ಮಾತನಾಡುತ್ತೇನೆ' ಎಂದು ಮೈರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT