ಡಾಕರ್, ಘಾನಾ (ರಾಯಿಟರ್ಸ್): ‘ಮರ್‌ಬರ್ಗ್’ ವೈರಾಣುವಿನ ಮೊದಲ ಪ್ರಕರಣ ಪಶ್ಚಿಮ ಆಫ್ರಿಕಾ ಖಂಡದ ಘಾನಾದಲ್ಲಿ ಪತ್ತೆಯಾಗಿದೆ. ಎಬೊಲಾ ಮಾದರಿಯ ಈ ವೈರಾಣು ಹೆಚ್ಚು ಸೋಂಕುಕಾರಕವಾದುದು ಎಂದು ಘಾನಾ ಪ್ರತಿಕ್ರಿಯಿಸಿದೆ.
ಸೋಂಕು ಪತ್ತೆಯಾಗಿದ್ದ ಇಬ್ಬರು ರೋಗಿಗಳು ಮೃತಪಟ್ಟಿದ್ದಾರೆ.ದಾಕರ್‌ನ ಪಸ್ತೇರ್ ಇನ್‌ಸ್ಟಿಟ್ಯೂಟ್‌ನಲ್ಲಿ ಹೆಚ್ಚಿನ ತಪಾಸಣೆಯ ನಂತರ ದೃಢಪಡಿಸಿಕೊಳ್ಳಲಾಗಿದೆ ಎಂದು ಘಾನಾ ಆರೋಗ್ಯ ಸೇವೆಯು (ಜಿಎಚ್ಎಸ್) ಹೇಳಿಕೆ ನೀಡಿದೆ.
ಮರ್‌ಬರ್ಗ್ ವೈರಾಣು ಜುಲೈ 10ರಂದು ಪತ್ತೆಯಾಗಿತ್ತು. ಆದರೆ, ದೃಢಪಡಿಸಿಕೊಳ್ಳಲು ಪ್ರಯೋಗಾಲಯದಲ್ಲಿ ಹೆಚ್ಚಿನ ತಪಾಸಣೆ ನಡೆಸಬೇಕಿತ್ತು.ಸೋಂಕು ಪೀಡಿತರಾಗಿದ್ದ ಇಬ್ಬರು ರೋಗಿಗಳಿಗೆ ಜ್ವರ, ನೆಗಡಿ, ವಾಂತಿ ಲಕ್ಷಣಗಳು ಕಂಡುಬಂದಿದ್ದವು ಎಂದು ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯೂಎಚ್‌ಒ) ಪ್ರತಿಕ್ರಿಯಿಸಿದೆ.
1967ರ ಬಳಿಕ ಮರ್‌ಬರ್ಗ್ ಸೋಂಕು ಪ್ರಕರಣಗಳು ಸುಮಾರು 12 ಬಾರಿ,ಬಹುತೇಕ ಆಫ್ರಿಕಾ ಪ್ರಾಂತ್ಯದಲ್ಲೇ ಕಾಣಿಸಿಕೊಂಡಿದೆ. ಈ ಹಿಂದೆ ರೋಗಿಯ ಸಾವಿನ ಸಾಧ್ಯತೆಗಳು ಶೇ 24 ರಿಂದ 88ರಷ್ಟಿದ್ದವು.ಮೊದಲು ಬಾವಲಿಗಳಿಂದ ತಗುಲುವ ಸೋಂಕು, ನಂತರ ಪರಸ್ಪರ ಸಂಪರ್ಕಕ್ಕೆ ಬರುವ ಮನುಷ್ಯರಿಗೆ ಹರಡಲಿದೆ ಎಂದು ಡಬ್ಲ್ಯೂಎಚ್‌ಒ ತಿಳಿಸಿದೆ.
ಕೋವಿಡ್: ‘ಬೂಸ್ಟರ್ ಡೋಸ್ ಅಗತ್ಯ’
ವಾಷಿಂಗ್ಟನ್ (ಪಿಟಿಐ): ಕೋವಿಡ್‌ನಿಂದ ರಕ್ಷಣೆಗೆ ಪಡೆದಿರುವ ಲಸಿಕೆಯ ಪರಿಣಾಮ ಅಲ್ಪಾವಧಿ ಮಾತ್ರ. ಹೆಚ್ಚಿನ ಸುರಕ್ಷತೆಗೆ ಬೂಸ್ಟರ್ ಡೋಸ್ ಪಡೆಯುವುದು ಅಗತ್ಯ ಎಂದು ನೂತನ ಅಧ್ಯಯನ ತಿಳಿಸಿದೆ.
ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ನಿಯತಕಾಲಿಕದಲ್ಲಿ ನೂತನ ಅಧ್ಯಯನ ವರದಿ ಪ್ರಕಟವಾಗಿದೆ. ಸೋಂಕಿನ ಪರಿಣಾಮ ಭಿನ್ನ. ಲಸಿಕೆ ನಂತರವೂ ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಆತ ಪಡೆದಿರುವ ಲಸಿಕೆಯ ಮಾದರಿಯನ್ನು ಆಧರಿಸಿರುತ್ತದೆ ಎಂದಿದೆ.
ಈ ಅಧ್ಯಯನದ ಪ್ರಕಾರ, ಫೈಜರ್ ಮತ್ತು ಮೊಡರ್ನಾ ಲಸಿಕೆಯು ಜಾನ್ಸನ್ ಅಂಡ್ ಜಾನ್ಸನ್ ಮತ್ತು ಆಸ್ಟ್ರಾಜೆನಿಕಾ ಲಸಿಕೆಗೆ ಹೋಲಿಸಿದಲ್ಲಿ ಹೆಚ್ಚು ಪರಿಣಾಮವು ಬೀರಲಿದೆ ಎಂದು ತಿಳಿಸಿದೆ.