ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಫಾ ಆಸ್ಪತ್ರೆ ಸಂಕೀರ್ಣದಲ್ಲಿ ಹಮಾಸ್ ಭಯೋತ್ಪಾದಕ ಸುರಂಗ ಮಾರ್ಗ ಪತ್ತೆ: ಇಸ್ರೇಲ್

ಗಾಜಾದ ಅಲ್ ಶಿಫಾ ಆಸ್ಪತ್ರೆ ಸಂಕೀರ್ಣದಲ್ಲಿ ಹಮಾಸ್ ಸುರಂಗ ಮಾರ್ಗ, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ಬೃಹತ್ ಸಂಗ್ರಹವನ್ನು ಪತ್ತೆ ಮಾಡಲಾಗಿದೆ–ಇಸ್ರೇಲ್ ರಕ್ಷಣಾ ಪಡೆ
Published 17 ನವೆಂಬರ್ 2023, 5:31 IST
Last Updated 17 ನವೆಂಬರ್ 2023, 5:31 IST
ಅಕ್ಷರ ಗಾತ್ರ

ಟೆಲ್‌ ಅವೀವ್(ಇಸ್ರೇಲ್): ಗಾಜಾದ ಶಿಫಾ ಆಸ್ಪತ್ರೆ ಸಂಕೀರ್ಣದಲ್ಲಿ ಹಮಾಸ್ ಭಯೋತ್ಪಾದಕ ಸುರಂಗ ಮಾರ್ಗವನ್ನು ಪತ್ತೆಹಚ್ಚಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್) ಹೇಳಿಕೊಂಡಿದೆ.

‌‌‌‌'ಗಾಜಾದ ಮೂರು ದೊಡ್ಡ ಆಸ್ಪತ್ರೆಗಳ ಮೇಲೆ ಹಮಾಸ್ ಶೋಷಣೆಯ ಮತ್ತೊಂದು ಮುಖವನ್ನು ಇಸ್ರೇಲ್‌ ಬಹಿರಂಗಪಡಿಸುತ್ತಿದೆ. ಇಸ್ರೇಲಿ ಸೈನ್ಯ ಗಾಜಾದ ಅತಿದೊಡ್ಡ ಆಸ್ಪತ್ರೆಯಾದ ಅಲ್ ಶಿಫಾದ ಹೊರಾಂಗಣ ಪ್ರದೇಶದಲ್ಲಿ ಸುರಂಗ ಮಾರ್ಗವನ್ನು ಪತ್ತೆ ಹಚ್ಚಿದೆ' ಎಂದು ಐಡಿಎಫ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ. ಜತೆಗೆ ವಿಡಿಯೊ ತುಣುಕನ್ನು ಸಹ ಬಿಡುಗಡೆ ಮಾಡಿದೆ.

ಮತ್ತೊಂದು ಪೋಸ್ಟ್‌ನಲ್ಲಿ, 'ರಾಂಟಿಸಿ ಆಸ್ಪತ್ರೆಯೊಳಗೆ, ಮತ್ತೊಂದು ಭಯೋತ್ಪಾದಕ ಸುರಂಗ ಮಾರ್ಗವನ್ನು ಐಡಿಎಫ್ ಪಡೆಗಳು ಪತ್ತೆಹಚ್ಚಿವೆ' ಎಂದು ಹೇಳಿದೆ.

ಕಳೆದ 24 ಗಂಟೆಗಳಲ್ಲಿ ಶಾಲ್ದಾಗ್ ಎಸ್‌ಎಫ್‌ ಘಟಕ, 7ನೇ ಬ್ರಿಗೇಡ್, ಮತ್ತು ಹೆಚ್ಚುವರಿ ಎಸ್‌ಎಫ್‌ ಘಟಕಗಳು ಶಿಫಾ ಆಸ್ಪತ್ರೆಯೊಳಗೆ ಸುರಂಗ ಮಾರ್ಗವನ್ನು ಪತ್ತೆ ಹಚ್ಚಿವೆ. ಅಲ್ಲದೇ ಅಲ್-ಕುಡ್ಸ್ ಆಸ್ಪತ್ರೆಯೊಳಗೆ ಹಮಾಸ್‌ ಉಗ್ರರು ಅ.7ರ ದಾಳಿಗೆ ಸಿದ್ಧಪಡಿಸಿದ್ದ ಬೂಬಿ-ಟ್ರ್ಯಾಪ್ಡ್ ವಾಹನವನ್ನು ಸಹ ಪತ್ತೆ ಮಾಡಲಾಗಿದೆ.

ಇದರಲ್ಲಿ ಬೃಹತ್‌ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳಿವೆ ಎಂದು ಇಸ್ರೇಲ್‌ ಏರ್ ಫೋರ್ಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT