ಮಾಸ್ಕೋ: ರಷ್ಯಾದ ನ್ಯೂಕ್ಲಿಯರ್ ಡಿಫೆನ್ಸ್ ಫೋರ್ಸ್ನ ಮುಖ್ಯಸ್ಥ ಲೆಫ್ಟಿನಂಟ್ ಜನರಲ್ ಇಗೋರ್ ಕಿರಿಗೋವ್ (65) ಅವರು ಮಾಸ್ಕೋದಲ್ಲಿ ನಡೆದ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ ಎಂದು ಆ ದೇಶದ ತನಿಖಾ ಸಮಿತಿ ತಿಳಿಸಿದೆ.

ಇಗೋರ್ ಕಿರಿಗೋವ್ ಅವರು ಉಕ್ರೇನ್ನ ಮೋಸ್ಟ್ ವಾಂಟೆಂಡ್ ಪಟ್ಟಿಯಲ್ಲಿದ್ದರು.

ಕಿರಿಗೋವ್ ಅವರು ಮಂಗಳವಾರ ಬೆಳಿಗ್ಗೆ ಮಾಸ್ಕೋದ ತಮ್ಮ ಅಪಾರ್ಟ್ಮೆಂಟ್ನಿಂದ ಹೊರಗೆ ಬಂದು ಸ್ಕೂಟರ್ ಒಂದನ್ನು ಪರಿಶೀಲಿಸುತ್ತಿದ್ದಾಗ ಸ್ಕೂಟರ್ನಿಂದ ಭಾರಿ ಪ್ರಮಾಣದ ಸ್ಫೋಟ ಸಂಭವಿಸಿದೆ. ಪರಿಣಾಮವಾಗಿ ಕಿರಿಗೋವ್ ಮತ್ತು ಸ್ಥಳದಲ್ಲಿದ್ದ ಇನ್ನೊಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ.

ಸ್ಫೋಟದ ಬಗ್ಗೆ ನಮ್ಮ ತನಿಖಾಧಿಕಾರಿಗಳು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಇದರ ಹಿಂದೆ ಉಕ್ರೇನ್ ಕೈವಾಡವಿದೆ ಎಂದು ರಷ್ಯಾದ ತನಿಖಾ ಸಮಿತಿ ಮುಖ್ಯಸ್ಥ ಸ್ವೆಟ್ಲಾನ್ ಪಿಟ್ರಿಂಕೋ ತಿಳಿಸಿದ್ದಾರೆ.

2022 ಫೆಬ್ರುವರಿಯಲ್ಲಿ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಆರಂಭಿಸಿದ ನಂತರ ಈ ವರ್ಷದ ನವೆಂಬರ್ ಅಂತ್ಯದ ವೇಳೆಗೆ ಉಕ್ರೇನ್ ಮೇಲೆ 4,800 ರಾಸಾಯಿನಿಕ ಅಸ್ತ್ರಗಳನ್ನು ಪ್ರಯೋಗಿಸಲು ಇಗೋರ್ ಕಿರಿಗೋವ್ ಕಾರಣರಾಗಿದ್ದಾರೆ ಎಂದು ಉಕ್ರೇನ್ ಆರೋಪಿಸಿದೆ.
.ಆಳ–ಅಗಲ | ವಿಶ್ವ ಚೆಸ್: ಏಷ್ಯಾ ರಾಷ್ಟ್ರಗಳ ಪಾರಮ್ಯ; ಹಿಡಿತ ಕಳೆದುಕೊಂಡ ರಷ್ಯಾ.Russia Ukraine War | ಉಕ್ರೇನ್ನ ವಿದ್ಯುತ್ ಕೇಂದ್ರಗಳ ಮೇಲೆ ರಷ್ಯಾ ದಾಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.