ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Israel-Hamas War | ದಾಳಿ ಮತ್ತಷ್ಟು ತೀವ್ರಗೊಳಿಸಿದ ಇಸ್ರೇಲ್

Published 10 ಡಿಸೆಂಬರ್ 2023, 14:45 IST
Last Updated 10 ಡಿಸೆಂಬರ್ 2023, 14:45 IST
ಅಕ್ಷರ ಗಾತ್ರ

ರಫಾಹ್ (ಗಾಜಾಪಟ್ಟಿ): ಇಸ್ರೇಲ್‌– ಹಮಾಸ್‌ ನಡುವೆ ಕದನವಿರಾಮ ಘೋಷಣೆಗೆ ಆಗ್ರಹಪಡಿಸುವ ಅಂತರರಾಷ್ಟ್ರೀಯ ಯತ್ನಕ್ಕೆ ಅಮೆರಿಕ ತಡೆಯೊಡ್ಡಿದ ಬೆನ್ನಲ್ಲೇ ಖಾನ್‌ ಯೂನಿಸ್ ಸೇರಿದಂತೆ ಗಾಜಾದ ಎಲ್ಲ ಪ್ರದೇಶಗಳ ಮೇಲೆ ಇಸ್ರೇಲ್‌ ಭಾನುವಾರ ದಾಳಿಯನ್ನು ತೀವ್ರಗೊಳಿಸಿದೆ.

ಕದನವಿರಾಮ ಘೋಷಣೆ ಹಾಗೂ ಹಮಾಸ್‌ನಿಂದ ಒತ್ತೆಯಾಳುಗಳ ಬೇಷರತ್‌ ಬಿಡುಗಡೆಗೆ ಆಗ್ರಹಪಡಿಸುವ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮತಕ್ಕೆ ಹಾಕಲಾಗಿದ್ದ ನಿರ್ಣಯದ ಅನುಮೋದನೆಯನ್ನು ಅಮೆರಿಕ ತನ್ನ ‘ವಿಟೊ’ ಪರಮಾಧಿಕಾರ ಬಳಸಿ ತಡೆಹಿಡಿದಿದೆ.

‘ಹಮಾಸ್‌ ಬಂಡುಕೋರರು ಈವರೆಗೆ ಸುಮಾರು 117 ಒತ್ತೆಯಾಳುಗಳನ್ನು ಹತ್ಯೆ ಮಾಡಿದ್ದಾರೆ. ಅಕ್ಟೋಬರ್‌ 7ರಂದು ವಶಕ್ಕೆ ಪಡೆಯಲಾದ 20 ಮಂದಿಯನ್ನು ಕೊಂದಿದ್ದಾರೆ. ಇಸ್ರೇಲ್‌ ಬಂಧಿಸಿರುವ ಅತಿ ಹೆಚ್ಚಿನ ಸಂಖ್ಯೆಯ ಪ್ಯಾಲೆಸ್ಟೀನಿಯರೊಂದಿಗೆ ಒತ್ತೆಯಾಳುಗಳನ್ನು ವಿನಿಮಯ ಮಾಡಿಕೊಳ್ಳಲು ಉಗ್ರರು ಬಯಸಿದ್ದಾರೆ’ ಎಂದು ಪ್ರಧಾನಿ ನೆತನ್ಯಾಹು ಕಚೇರಿ ತಿಳಿಸಿದೆ.

ಹಮಾಸ್‌ ಬಂಡುಕೋರರು ಉತ್ತರದಾದ್ಯಂತ ಇರುವ ಕಾರಣ ಇಸ್ರೇಲ್‌ ತೀವ್ರ ದಾಳಿ ನಡೆಸುತ್ತಿದೆ ಎಂದು ಇಸ್ರೇಲ್‌ ಮಾಧ್ಯಮಗಳು ವರದಿ ಮಾಡಿವೆ.

ಕಳೆದ ಆರು ವಾರಗಳಿಂದ ಇಸ್ರೇಲ್‌ ಪಡೆಗಳು ನಡೆಸಿದ ಭೂ ಮತ್ತು ವಾಯುದಾಳಿಯಿಂದಾಗಿ ಅಕ್ಕಪಕ್ಕದ ನಗರಗಳು ಸಂಪೂರ್ಣವಾಗಿ ನೆಲಸಮವಾಗಿವೆ. 

ಸಾವಿರಾರು ಪ್ಯಾಲೆಸ್ಟೀನಿಯನ್ನರು ಮೃತಪಟ್ಟ ನಂತರ ಶಾಶ್ವತ ಕದನ ವಿರಾಮ ಘೋಷಿಸುವಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಇಸ್ರೇಲ್‌ ಮೇಲೆ ಒತ್ತಡ ಹೆಚ್ಚಿದೆ. ಗಾಜಾದ 2.3 ಕೋಟಿ ಜನರ ಪೈಕಿ ಶೇ 85ರಷ್ಟು ಜನರು ಸ್ಥಳಾಂತರಗೊಂಡಿದ್ದಾರೆ. ಈ ಮಧ್ಯೆ ಗಾಜಾದಲ್ಲಿ ಸುರಕ್ಷಿತ ಸ್ಥಳ ಎಂಬುದೇ ಇಲ್ಲದಂತಾಗಿದೆ ಎಂದು ವಿಶ್ವಸಂಸ್ಥೆಯ ಏಜೆನ್ಸಿಗಳು ಕಳವಳ ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT