ಕರಾಚಿ: ಪಾಕಿಸ್ತಾನದ ಕರಾಚಿ ನಗರದ ನಾರಾಯಣಪುರದ ನಾರಾಯಣ ಮಂದಿರದಲ್ಲಿ ಹಿಂದೂ ದೇವರ ಪ್ರತಿಮೆಯನ್ನು ಸೋಮವಾರ ವ್ಯಕ್ತಿಯೊಬ್ಬ ನಾಶಪಡಿಸಿದ್ದಾನೆ.

ಘಟನೆ ಸಂಬಂಧ ಮೊಹಮ್ಮದ್ ವಾಲೀದ್ ಶಬ್ಬೀರ್ ಎಂಬಾತನನ್ನು ಬಂಧಿಸಲಾಗಿದೆ. ಮುಖೇಶ್ ಕುಮಾರ್ ದೂರು ನೀಡಿದ್ದು, ಶಬ್ಬೀರ್ ಪ್ರತಿಮೆ ನಾಶಪಡಿಸಿದ್ದನ್ನು ನೋಡಿದ್ದೇನೆ ಎಂದಿದ್ದಾರೆ.

ದೇಗುಲಕ್ಕೆ ಬಂದಿದ್ದ ಹಿಂದೂಗಳೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಿಂದೂಗಳಿಗೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿ ಸ್ಥಳೀಯರು ಬಳಿಕ ಪ್ರತಿಭಟನೆಯನ್ನೂ ನಡೆಸಿದರು.

ಇಲ್ಲಿ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಂತಹ ಘಟನೆಗಳು ಅಶಾಂತಿ ಮೂಡಿಸಲಿವೆ. ಇದನ್ನು ಖಂಡಿಸುತ್ತೇನೆ ಎಂದು ಸಿಂಧ್ ಪ್ರಾಂತ್ಯದ ಸಚಿವ ಗ್ಯಾನ್‌ಚಂದ್ ಇಸ್ರಾಣಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.