ಇಸ್ಲಾಮಾಬಾದ್: ತಮ್ಮ ಹತ್ಯೆಗೆ ವಿದೇಶ ಮತ್ತು ಪಾಕಿಸ್ತಾನದಲ್ಲಿ ಸಂಚು ರೂಪಿಸಲಾಗುತ್ತಿದೆ. ಸಂಚಿನ ಹಿಂದಿರುವವರನ್ನು ವಿಡಿಯೊ ಸಂದೇಶವೊಂದರಲ್ಲಿ ಹೆಸರಿಸಿದ್ದೇನೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ ಬೆನ್ನಿಗೇ, ಅವರ ಎರಡು ಮೊಬೈಲ್ ಫೋನ್‌ಗಳು ಕಳುವಾಗಿವೆ. ಹೀಗಾಗಿ ಪಾಕಿಸ್ತಾನದಲ್ಲಿ ಅಚ್ಚರಿ ಮನೆ ಮಾಡಿದೆ.

ಸಮಾವೇಶವೊಂದರಲ್ಲಿ ಭಾಗವಹಿಸಲೆಂದು ಸಿಯಾಲ್‌ಕೋಟ್‌ಗೆ ತೆರಳಿದ್ದಾಗ ವಿಮಾನ ನಿಲ್ದಾಣದಲ್ಲಿ ಫೋನ್‌ಗಳನ್ನು ಕದಿಯಲಾಗಿದೆ ಎಂದು ಖಾನ್ ಅವರ ವಕ್ತಾರರಾದ ಶಾಹಬಾಝ್ ಗಿಲ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ರ‍್ಯಾಲಿಯೊಂದರಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದ ಮಾಜಿ ಪ್ರಧಾನಿ ಖಾನ್, ತಮ್ಮ ಜೀವಕ್ಕೆ ಬೆದರಿಕೆ ಇರುವುದಾಗಿಯೂ, ಪಿತೂರಿಯಲ್ಲಿ ಭಾಗಿಯಾಗಿರುವವರನ್ನು ವಿಡಿಯೊವೊಂದರಲ್ಲಿ ಉಲ್ಲೇಖಿಸಿರುವುದಾಗಿಯೂ, ಒಂದು ವೇಳೆ ಹತ್ಯೆಯಾದ ಸಂದರ್ಭದಲ್ಲಿ ವಿಡಿಯೊ ಬಿಡುಗಡೆ ಆಗುವುದಾಗಿ ಹೇಳಿದ್ದರು.

‘ಒಂದೆಡೆ, ಇಮ್ರಾನ್ ಖಾನ್‌ಗೆ ಉದ್ದೇಶಪೂರ್ವಕವಾಗಿಯೇ ಭದ್ರತೆಯನ್ನು ಒದಗಿಸುತ್ತಿಲ್ಲ. ಇನ್ನೊಂದು ಕಡೆ ಅವರ ಫೋನ್‌ಗಳನ್ನು ಕಳವು ಮಾಡಲಾಗಿದೆ’ ಎಂದು ಗಿಲ್ ಹೇಳಿದರು.

‘ಮಾಜಿ ಪ್ರಧಾನಿ ಇಮ್ರಾನ್ ಖಾನ್ ರೆಕಾರ್ಡ್ ಮಾಡಿದ ವಿಡಿಯೊ ಹೇಳಿಕೆಯು ಆ ಫೋನ್‌ಗಳಲ್ಲಿ ಇಲ್ಲ. ಹೀಗಾಗಿ ನೀವು ಸಂಪೂರ್ಣವಾಗಿ ಗೊಂದಲಕ್ಕೀಡಾಗಿದ್ದೀರಿ’ ಎಂದು ಗಿಲ್ ಯಾರ ಹೆಸರೂ ಹೇಳದೇ ವ್ಯಂಗ್ಯವಾಡಿದ್ದಾರೆ.

ಫೋನ್‌ಗಳ ಕಳವು ಮತ್ತು ಗಿಲ್ ಅವರ ಹೇಳಿಕೆ ಬಗ್ಗೆ ಸರ್ಕಾರದ ಕಡೆಯಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.