ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ವಿವಾದ: ಭೂತಾನ್ ಜೊತೆಗೆ ಭಾರತ ತೆರೆಮರೆಯ ಮಾತುಕತೆ

Last Updated 8 ಜುಲೈ 2020, 7:16 IST
ಅಕ್ಷರ ಗಾತ್ರ

ನವದೆಹಲಿ: ಭೂತಾನ್‌ನ ಅಭಯಾರಣ್ಯವೊಂದು ತನ್ನ ದೇಶದ ಗಡಿಯಲ್ಲಿದೆ ಎಂಬ ಚೀನಾದ ಹಕ್ಕು ಸ್ಥಾಪನೆ ಯತ್ನದ ನಂತರ ಭೂತಾನ್ ಆಡಳಿತದೊಂದಿಗೆ ಭಾರತ ತೆರೆಮರೆಯ ಮಾತುಕತೆ ಆರಂಭಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಲಡಾಖ್‌ನ ಗಾಲ್ವನ್ ಕಣಿವೆಯಿಂದ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಂಡಿರುವ ಚೀನಾ, ಭಾರತವನ್ನು ಕೆರಳಿಸುವ ಉದ್ದೇಶದಿಂದಲೇ ಭೂತಾನ್‌ನಲ್ಲಿ ಗಡಿ ವಿವಾದ ಕೆದಕಿದೆ.ಈ ಅಭಯಾರಣ್ಯವು ಅರುಣಾಚಲ ಪ್ರದೇಶದೊಂದಿಗೆ ಗಡಿ ಹಂಚಿಕೊಳ್ಳುತ್ತದೆ. ಎಂದು ವಿಶ್ಲೇಷಿಸಲಾಗಿದೆ.

ಇದು ಚೀನಾ ಮತ್ತು ಭೂತಾನ್ ದೇಶಗಳಿಗೆ ಸಂಬಂಧಿಸಿದ ದ್ವಿಪಕ್ಷೀಯ ವಿಚಾರವಾಗಿರುವ ಕಾರಣ ಭಾರತವು ಈ ವಿವಾದದಲ್ಲಿ ನೇರವಾಗಿ ಪಾಲ್ಗೊಂಡಿಲ್ಲ. ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಭೂತಾನ್‌ಗೆ ಅಗತ್ಯ ರಾಜತಾಂತ್ರಿಕ ನೆರವು ನೀಡುತ್ತಿದೆ.

ಗಡಿ ವಿವಾದದ ಬಗ್ಗೆ ಈವರೆಗೆ ಚೀನಾ ಜೊತೆಗೆ ಭೂತಾನ್ 24 ಸುತ್ತುಗಳ ಮಾತುಕತೆ ನಡೆಸಿದೆ. ಆದರೆ ಪೂರ್ವ ವಲಯದ ಗಡಿಯ ಬಗ್ಗೆ ಯಾವುದೆ ವಿವಾದ ಇರಲಿಲ್ಲ ಎಂದು ಭೂತಾನ್‌ನ ಮೂಲಗಳನ್ನು ಉಲ್ಲೇಖಿಸಿ 'ದಿ ಪ್ರಿಂಟ್' ಜಾಲತಾಣ ವರದಿ ಮಾಡಿದೆ.

ವಿವಾದಕ್ಕೆ ಸಂಬಂಧಿಸಿದಂತೆ ಭೂತಾನ್‌ನ ಪ್ರಮುಖ ದೈನಿಕ 'ದಿ ಭೂತಾನಿಸ್‌'ನ ಸಂಪಾದಕ ತೆನ್ಜಿಂಗ್ ಲ್ಯಾಮ್ಸಂಗ್‌ ಟ್ವೀಟ್ ಮಾಡಿದ್ದು, ಸಕ್ತೆಂಗ್‌ ಅಭಯಾರಣ್ಯವು ಭೂತಾನ್‌ಗೆ ಸೇರಿದ್ದು ಎಂದು ಚೀನಾದ 1977ರ ಭೂಪಟ ಸ್ಪಷ್ಟವಾಗಿ ಹೇಳುತ್ತದೆ. ಈಗೇಕೆ ಈ ವಿವಾದ' ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT