ತೆರಿಗೆ ಹೇರಿಕೆಯು ಭಾರತದ ಅಕ್ಕಿ ರಫ್ತಿನ ಮೇಲೆ ತಾತ್ಕಾಲಿಕ ಪರಿಣಾಮ ಬೀರಬಹುದಷ್ಟೇ. ಹೊಸ ಕಾರ್ಯತಂತ್ರ ಅಳವಡಿಸಿಕೊಂಡರೆ ಅಮೆರಿಕದಲ್ಲಿ ಅಕ್ಕಿ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ನಮಗೆ ಇನ್ನೂ ಹೆಚ್ಚಿನ ಅವಕಾಶಗಳಿವೆ
– ಪ್ರೇಮ್ ಗಾರ್ಗ್, ಭಾರತೀಯ ಅಕ್ಕಿ ರಫ್ತುದಾರರ ಒಕ್ಕೂಟದ ಅಧ್ಯಕ್ಷ
ಅಮೆರಿಕ ಆಮದು ಸುಂಕವನ್ನು ಎಷ್ಟೇ ಹೆಚ್ಚಿಸಿದರೂ ಅಲ್ಲಿನ ಮಾರುಕಟ್ಟೆಯಲ್ಲಿ ಬಾಸ್ಮತಿ ಅಕ್ಕಿಯ ಬೇಡಿಕೆ ಕುಸಿಯುವುದಿಲ್ಲ. ಭಾರತದ ಅಕ್ಕಿ ರಫ್ತುದಾರರಿಗೆ ಇದರಿಂದ ಯಾವುದೇ ನಷ್ಟವಿಲ್ಲ
– ಸತೀಶ್ ಗೋಯಲ್, ಅಖಿಲ ಭಾರತ ಅಕ್ಕಿ ರಫ್ತುದಾರರ ಒಕ್ಕೂಟದ ಅಧ್ಯಕ್ಷ