ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದೊಟ್ಟಿಗೆ ಎಂಜಿನ್‌ ಉತ್ಪಾದನೆ ಒಪ್ಪಂದ ಕ್ರಾಂತಿಕಾರಿ: ಅಮೆರಿಕ

ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌ ಶ್ಲಾಘನೆ
Published 18 ಏಪ್ರಿಲ್ 2024, 12:44 IST
Last Updated 18 ಏಪ್ರಿಲ್ 2024, 12:44 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತೀಯ ವಾಯುಪಡೆಯ ಫೈಟರ್‌ ಜೆಟ್‌ಗಳಿಗೆ(ಯುದ್ಧ ವಿಮಾನ) ಎಂಜಿನ್‌ಗಳನ್ನು ಉತ್ಪಾದಿಸುವ ಭಾರತ–ಅಮೆರಿದ ಜಂಟಿ ಒಪ್ಪಂದವು ಕ್ರಾಂತಿಕಾರಿಯಾಗಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌ ಅವರು ಬಜೆಟ್‌ ಸಂಬಂಧಿತ ಸಮಿತಿಗೆ ತಿಳಿಸಿದರು. ಭಾರತದೊಂದಿಗೆ ಅಮೆರಿಕ ಹೊಂದಿರುವ ಉತ್ತಮ ಸಂಬಂಧವನ್ನು ಶ್ಲಾಘಿಸಿದರು. 

ಕಳೆದ ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಐತಿಹಾಸಿಕ ಅಮೆರಿಕ ಭೇಟಿ ಸಂದರ್ಭದಲ್ಲಿ ಉಭಯ ದೇಶಗಳ ನಡುವಿನ ಈ ಒಪ್ಪಂದವನ್ನು ಘೋಷಿಸಲಾಗಿತ್ತು. 

ಭಾರತದಲ್ಲಿ ಎಫ್‌–414 ಯುದ್ಧ ವಿಮಾನಗಳ ಎಂಜಿನ್‌ಗಳನ್ನು ಜಂಟಿಯಾಗಿ ಉತ್ಪಾದಿಸಲು ಹಿಂದೂಸ್ತಾನ್‌ ಏರೋನಾಟಿಕ್ಸ್‌ ಸಂಸ್ಥೆಯೊಂದಿಗೆ ಜನರಲ್‌ ಎಲೆಕ್ಟ್ರಿಕ್‌ ಒಪ್ಪಂದಕ್ಕೆ ಸಹಿ ಹಾಕಿತು. 

ಒಪ್ಪಂದದ ಪ್ರಕಾರ ತೇಜಸ್‌ ಲಘು ಯುದ್ಧ ವಿಮಾನ ‘ಎಮ್‌ಕೆ2’ಗಾಗಿ ಜಿಇ ಏರೋಸ್ಪೇಸ್‌ನ ಎಫ್‌–414 ಎಂಜಿನ್‌ಗಳನ್ನು ಭಾರತದಲ್ಲಿ ಉಭಯ ಸಂಸ್ಥೆಗಳ ಸಹಯೋಗದಲ್ಲಿ ಉತ್ಪಾದಿಸಲಾಗುತ್ತದೆ.  

‘ನಾವು ಇತ್ತೀಚೆಗೆ ಭಾರತದಲ್ಲಿ ಜೆಟ್‌ ಆಯುಧ ಮತ್ತು ಜೆಟ್‌ ಎಂಜಿನ್‌ ಉತ್ಪಾದಿಸಲು ಒಪ್ಪಂದ ಮಾಡಿಕೊಂಡಿದ್ದೇವೆ. ಇದು  ಕ್ರಾಂತಿಕಾರಿ ನಡೆಯಾಗಿದೆ. ಇದು ಭಾರತದ ಸಾಮರ್ಥ್ಯ ವರ್ಧನೆಗೆ ಕಾರಣವಾಗುತ್ತದೆ. ನಾವು ಭಾರತದೊಂದಿಗೆ ಶಸ್ತ್ರಸಜ್ಜಿತ ವಾಹನವನ್ನು ಸಹ ಉತ್ಪಾದಿಸುತ್ತಿದ್ದೇವೆ’ ಎಂದು ಆಸ್ಟಿನ್‌ ಮಾಹಿತಿ ನೀಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT