ನವದೆಹಲಿ: ಬಹುನಿರೀಕ್ಷಿತ ವ್ಯಾಪಾರ ಒಪ್ಪಂದದ ಮುಂದಿನ ಸುತ್ತಿನ ಮಾತುಕತೆಗಾಗಿ ಅಮೆರಿಕದ ತಂಡವು ಆಗಸ್ಟ್ 25ರಂದು ಭಾರತಕ್ಕೆ ಭೇಟಿ ನೀಡಲಿದೆ ಎಂದು ಅಧಿಕಾರಿಯೊಬ್ಬರು ಇಂದು (ಮಂಗಳವಾರ) ತಿಳಿಸಿದ್ದಾರೆ.

ಕೃಷಿ ಮತ್ತು ಹೈನುಗಾರಿಕೆ ಉತ್ಪನ್ನಗಳಿಗೆ ವಿಧಿಸುವ ತೆರಿಗೆಯ ವಿಚಾರದಲ್ಲಿ ಮಾತುಕತೆ ಪೂರ್ಣಗೊಳ್ಳದ ಪರಿಣಾಮ ಭಾರತ ಹಾಗೂ ಅಮೆರಿಕ ನಡುವಣ ವ್ಯಾಪಾರ ಒಪ್ಪಂದಕ್ಕೆ ಹಿನ್ನಡೆಯಾಗಿತ್ತು.

ಆಗಸ್ಟ್ 1ರ ಗಡುವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವೆ ಮಧ್ಯಂತರ ವ್ಯಾಪಾರ ಒಪ್ಪಂದ ಏರ್ಪಡುವ ನಿರೀಕ್ಷೆಯಿದೆ.

ಭಾರತ ಸೇರಿದಂತೆ ಹಲವು ರಾಷ್ಟ್ರಗಳ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ್ದ ಗಡುವು ಆಗಸ್ಟ್ 1ಕ್ಕೆ ಅಂತ್ಯಗೊಳ್ಳಲಿದೆ. ಏತನ್ಮಧ್ಯೆ ಭಾರತದೊಂದಿಗೆ ಆರನೇ ಸುತ್ತಿನ ಮಾತುಕತೆಗಾಗಿ ಅಮೆರಿಕದ ತಂಡವು ಭೇಟಿ ನೀಡುತ್ತಿದೆ.

ಕಳೆದ ವಾರ ವಾಷಿಂಗ್ಟನ್ನಲ್ಲಿ ಐದನೇ ಸುತ್ತಿನ ಮಾತುಕತೆ ನಡೆದಿತ್ತು.

ಏಪ್ರಿಲ್ 2ರಂದು ಸುಂಕ ನೀತಿ ಘೋಷಿಸಿದ್ದ ಟ್ರಂಪ್ ಬಳಿಕ 90 ದಿನಗಳ ಕಾಲ ಮುಂದೂಡಿದ್ದರು. ತದನಂತರ ಜುಲೈ 9ರಂದು ಮತ್ತೆ ಆಗಸ್ಟ್ 1ರವರೆಗೆ ವಿಸ್ತರಿಸಿದ್ದರು. ಭಾರತದ ಮೇಲೆ ಶೇ 26ರಷ್ಟು ಸುಂಕ ವಿಧಿಸುವುದಾಗಿ ಎಚ್ಚರಿಸಿದ್ದರು.
.ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾತುಕತೆ ಪ್ರಗತಿ: ಪಿಯೂಷ್ ಗೋಯಲ್.ಭಾರತ–ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ; ಕೃಷಿಕರಿಗೆ ಹೆಚ್ಚು ಸಿಹಿ: ಇಲ್ಲಿದೆ ವಿವರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.