ನವದೆಹಲಿ: ಅಕ್ರಮವಾಗಿ ವಾಸಿಸುತ್ತಿದ್ದ ಕನಿಷ್ಠ 2,790 ಮಂದಿಯನ್ನು ಅಮೆರಿಕ ಗಡೀಪಾರು ಮಾಡಿದ್ದು, ಅವರು ದೇಶಕ್ಕೆ ಮರಳಿದ್ದಾರೆ ಎಂದು ಭಾರತ ಸರ್ಕಾರ ಗುರುವಾರ ತಿಳಿಸಿದೆ.
.ಅಂಬೇಡ್ಕರ್ ಭಾವಚಿತ್ರ ವಿರೂಪ | ರೌಡಿ ಶೀಟ್ ತೆರೆದು ಗಡೀಪಾರು ಮಾಡಿ: ಸುನೀಲ್ ಬೋಸ್.
ತಮ್ಮ ವಾರದ ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಈ ಮಾಹಿತಿ ನೀಡಿದ್ದಾರೆ.

‘ಈ ವರ್ಷ ಜನವರಿಯಿಂದ ಮಾನದಂಡಗಳನ್ನು ಪೂರೈಸದ 2,790ಕ್ಕೂ ಹೆಚ್ಚು ಭಾರತದ ನಾಗರಿಕರನ್ನು ಅಮೆರಿಕ ಗಡೀಪಾರು ಮಾಡಿದೆ. ಅವರು ಅಲ್ಲಿ ಕಾನೂನು ಬಾಹಿರವಾಗಿ ವಾಸ ಮಾಡುತ್ತಿದ್ದರು. ನಾವು ಅವರ ಮಾಹಿತಿ ಹಾಗೂ ರಾಷ್ಟ್ರೀಯತೆಯನ್ನು ಪರಿಶೀಲಿಸಿದ್ದೇವೆ. ಅವರು ಮರಳಿ ಬಂದಿದ್ದಾರೆ. ಇದು 29ನೇ ಅಕ್ಟೋಬರ್ವರೆಗಿನ ಸ್ಥಿತಿ’ ಎಂದು ಅವರು ಮಾಹಿತಿ ನೀಡಿದ್ದಾರೆ.
.ದಕ್ಷಿಣ ಕನ್ನಡದಿಂದ ರಾಯಚೂರಿನ ಮಾನ್ವಿಗೆ ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು.
ಈ ವರ್ಷದಲ್ಲಿ ಯುಕೆಯಿಂದ ಗಡೀಪಾರು ಆದ ಭಾರತೀಯರ ಸಂಖ್ಯೆಯನ್ನೂ ಅವರಿಗೆ ಕೇಳಲಾಯಿತು.

‘ಯುಕೆಯಿಂದ ಈ ವರ್ಷ ಸುಮಾರು 100 ಭಾರತದ ನಾಗರಿಕರನ್ನು ಗಡೀಪಾರು ಮಾಡಲಾಗಿದೆ. ಅವರ ವಿವರಗಳನ್ನು ನಾವು ಪರಿಶೀಲಿಸಿದ್ದೇವೆ’ ಎಂದು ಜೈಸ್ವಾಲ್ ಮಾಹಿತಿ ನೀಡಿದ್ದಾರೆ.
.ವಿಜಯಪುರ | 8 ರೌಡಿ ಶೀಟರ್ ಗಡೀಪಾರು: ಎಸ್ಪಿ ಲಕ್ಷ್ಮಣ ನಿಂಬರಗಿ ಆದೇಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.