ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೂಕರ್‌ ಪ್ರಶಸ್ತಿ ಅಂತಿಮ ಸ್ಪರ್ಧೆಗೆ ಭಾರತ ಮೂಲದ ಲೇಖಕಿಯ ಕೃತಿ

Published 1 ಆಗಸ್ಟ್ 2023, 15:08 IST
Last Updated 1 ಆಗಸ್ಟ್ 2023, 15:08 IST
ಅಕ್ಷರ ಗಾತ್ರ

ಲಂಡನ್‌ (ಪಿಟಿಐ): ಭಾರತ ಮೂಲದ, ಲಂಡನ್‌ನ ಲೇಖಕಿ ಚೇತನಾ ಮಾರೂ ಅವರ ಪ್ರಥಮ ಕಾದಂಬರಿ ‘ವೆಸ್ಟರ್ನ್ ಲೇನ್‌’, 2023ನೇ ಸಾಲಿನ ಬೂಕರ್ ಪ್ರಶಸ್ತಿ ಸ್ಪರ್ಧೆಯಲ್ಲಿರುವ 13 ಕೃತಿಗಳ ಪಟ್ಟಿಗೆ ಸೇರ್ಪಡೆಯಾಗಿದೆ.

ಅಂತಿಮ ಸ್ಪರ್ಧೆಯಲ್ಲಿರುವ 13 ಕೃತಿಗಳ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ. 11 ವರ್ಷ ವಯಸ್ಸಿನ ಬಾಲಕಿ ಗೋಪಿ ಮತ್ತು ಕುಟುಂಬದ ಜೊತೆಗೆ ಆಕೆಯ ಕುಟುಂಬದ ಒಡನಾಟ, ಸಂಬಂಧ ಕಾದಂಬರಿಯ ವಸ್ತು. 

‘ಬ್ರಿಟಿಷ್‌ ಗುಜರಾತಿ ಸಾಮಾಜಿಕ ಪರಿಸರದ ಹಿನ್ನೆಲೆಯ ಚಿತ್ರಣವುಳ್ಳ ಈ ಕಾದಂಬರಿಯಲ್ಲಿ ಭಾವನೆಗಳ ತಾಕಲಾಟದ ಅಭಿವ್ಯಕ್ತಿಗೆ ರೂಪಕವಾಗಿ ಸ್ಕ್ವಾಶ್‌ ಕ್ರೀಡೆಯು ಬಳಕೆಯಾಗಿದೆ’ ಎಂದು ಬೂಕರ್‌ ಪ್ರಶಸ್ತಿಯ ತೀರ್ಪುಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಸ್ತು ಮತ್ತು ರೂಪಕವಾಗಿ ಸ್ಕ್ವಾಶ್ ಕ್ರೀಡೆಯನ್ನು ಕೌಶಲಯುಕ್ತವಾಗಿ ಬಳಸಲಾಗಿದೆ. ಕುಟುಂಬ ಸಂಬಂಧವನ್ನು ಪರಿಣಾಮಕಾರಿಯಾಗಿ ಕೃತಿ ಬಿಂಬಿಸಿದೆ ಎಂದು ಕೆನಡಾದ ಲೇಖಕ, ತೀರ್ಪುಗಾರ ಮಂಡಳಿಯಲ್ಲಿರುವ ಎಸಿ ಎಡುಗ್ಯಾನ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

ಅಕ್ಟೋಬರ್‌ 2022ರಿಂದ ಸೆಪ್ಟೆಂಬರ್ 2023ರವರೆಗೆ ಪ್ರಕಟವಾಗಿರುವ 163 ಕೃತಿಗಳು ಪ್ರಶಸ್ತಿಗೆ ಪ್ರವೇಶ ಪಡೆದಿದ್ದವು. ಈ ಪೈಕಿ 13 ಕೃತಿಗಳು ಪ್ರಶಸ್ತಿಯ ಅಂತಿಮ ಸ್ಪರ್ಧೆಯ ಪಟ್ಟಿಯಲ್ಲಿವೆ.

ಪ್ರಶಸ್ತಿ ವಿಜೇತ ಕೃತಿಯ ವಿವರವನ್ನು ನವೆಂಬರ್ 26ರಂದು ಲಂಡನ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಕಟಿಸಲಾಗುತ್ತದೆ. ಪ್ರಶಸ್ತಿಯು ‘ಐರಿಸ್‌’ ಫಲಕ, 50 ಸಾವಿರ ಪೌಂಡ್ ಸ್ಟರ್ಲಿಂಗ್ (ಸುಮಾರು ₹ 52.59 ಲಕ್ಷ) ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT