ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೂಕರ್ ಪ್ರಶಸ್ತಿ: ಸ್ಪರ್ಧೆಯಲ್ಲಿ ಭಾರತ ಮೂಲದ ಲೇಖಕಿಯ ಕೃತಿ

Published 22 ಸೆಪ್ಟೆಂಬರ್ 2023, 11:03 IST
Last Updated 22 ಸೆಪ್ಟೆಂಬರ್ 2023, 11:03 IST
ಅಕ್ಷರ ಗಾತ್ರ

ಲಂಡನ್: ಲಂಡನ್‌ನಲ್ಲಿ ವಾಸವಿರುವ ಭಾರತ ಮೂಲದ ಲೇಖಕಿ ಚೇತನಾ ಮಾರೂ ಅವರ ಚೊಚ್ಚಲ ಕಾದಂಬರಿ ‘ವೆಸ್ಟರ್ನ್ ಲೇನ್’ 2023ನೇ ಸಾಲಿನ ಬೂಕರ್ ಪ್ರಶಸ್ತಿಗೆ ಸ್ಪರ್ಧೆಯಲ್ಲಿರುವ ಆರು ಕೃತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. 

ಈ ಕಾದಂಬರಿಯು 11 ವರ್ಷದ ಬಾಲಕಿ ಗೋಪಿ ಮತ್ತು ಆಕೆಯ ಕುಟುಂಬದ ಜೊತೆಗಿನ ಒಡನಾಟವನ್ನು ಒಳಗೊಂಡಿರುವ ಕೃತಿಯಾಗಿದ್ದು, ಮಾನವನ ಭಾವನೆಗಳ ತಾಕಲಾಟದ ಅಭಿವ್ಯಕ್ತಿಗೆ ರೂಪಕವಾಗಿ ಸ್ಕ್ವಾಶ್‌ ಕ್ರೀಡೆಯು ಬಳಕೆಯಾಗಿದೆ ಎಂದು ಬೂಕರ್ ಪ್ರಶಸ್ತಿಯ ತೀರ್ಪುಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಸರಾಹ್ ಬರ್ನ್‌ಸ್ಟೀನ್ ಅವರ ಸ್ಟಡಿ ಫಾರ್ ಒಬಿಡಿಯನ್ಸ್, ಜೊನಾಥನ್ ಎಸ್ಕಾಫೆರಿ ಅವರ ಇಫ್ ಐ ಸರ್ವೈವ್ ಯು, ಪಾಲ್ ಹಾರ್ಡಿಂಗ್ ಅವರ ದಿ ಅದರ್ ಈಡನ್, ಪಾಲ್ ಲಿಂಚ್ ಅವರ ಪ್ರಾಫೆಟ್ ಸಾಂಗ್ ಮತ್ತು ಪಾಲ್ ಮುರೆ ಅವರ ದಿ ಬೀ ಸ್ಟಿಂಗ್ ಬೂಕರ್ ಪ್ರಶಸ್ತಿಗೆ ಪೈಪೋಟಿಯಲ್ಲಿರುವ ಇತರ ಕೃತಿಗಳಾಗಿವೆ. 

ಇದೇ ವರ್ಷದ ನವೆಂಬರ್ 26ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ವಿಜೇತ ಕೃತಿಗೆ ಸುಮಾರು ₹51 ಲಕ್ಷ (50 ಸಾವಿರ ಪೌಂಡ್) ನೀಡಲಾಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT