ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲಾರಿಡಾ | ಜೆಟ್‌ಸ್ಕಿಗಳ ನಡುವೆ ಅಪಘಾತ: ಭಾರತೀಯ ವಿದ್ಯಾರ್ಥಿ ಸಾವು

Published 14 ಮಾರ್ಚ್ 2024, 15:25 IST
Last Updated 14 ಮಾರ್ಚ್ 2024, 15:25 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ಫ್ಲಾರಿಡಾದಲ್ಲಿ ಸಮುದ್ರದಲ್ಲಿ ವಿಹಾರ ನಡೆಸುತ್ತಿದ್ದ ವೇಳೆ ಎರಡು ಜೆಟ್‌ಸ್ಕಿಗಳ ನಡುವೆ ಅಪಘಾತ ಸಂಭವಿಸಿದ್ದು, 27 ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.

‘ತೆಲಂಗಾಣ ಮೂಲದ ವೆಂಕಟರಮಣ ಪಿಟ್ಟಲ ಸಾವಿಗೀಡಾದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಇವರು ದಕ್ಷಿಣ ಫ್ಲಾರಿಡಾದಲ್ಲಿ ಶನಿವಾರ ಜೆಟ್‌ಸ್ಕಿಯನ್ನು ಸಮುದ್ರದಲ್ಲಿ ಚಲಾಯಿಸುತ್ತಿದ್ದಾಗ, 14 ವರ್ಷದ ಬಾಲಕನೊಬ್ಬ ಚಲಾಯಿಸುತ್ತಿದ್ದ ಜೆಟ್‌ಸ್ಕಿಯೊಂದಿಗೆ ಡಿಕ್ಕಿ ಹೊಡೆದಿದೆ’ ಎಂದು ಫ್ಲಾರಿಡಾದ ಮೀನು ಮತ್ತು ವನ್ಯಜೀವಿ ಸಂರಕ್ಷಣಾ ಆಯೋಗ (ಎಫ್‌ಡಬ್ಲ್ಯುಸಿ) ಹೇಳಿದೆ.

‘ವೆಂಕಟರಮಣ ಅವರು ಇಂಡಿಯಾನಾಪೊಲೀಸ್‌ನ ಇಂಡಿಯಾನಾ ವಿಶ್ವವಿದ್ಯಾಲಯ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದರು. ಈ ವರ್ಷದ ಮೇ ತಿಂಗಳಲ್ಲಿ ಅವರ ಪದವಿ ಪೂರ್ಣಗೊಳ್ಳುತ್ತಿತ್ತು’ ಎಂದು ಗೋಫಂಡ್‌ಮಿ ಎಂಬ ಜಾಲತಾಣ ತಿಳಿಸಿದೆ. ವೆಂಕಟರಮಣ ಅವರ ಪಾರ್ಥಿವ ಶರೀರವನ್ನು ತೆಲಂಗಾಣಕ್ಕೆ ಕಳುಹಿಸಲು ನಿಧಿಯನ್ನು ಸಂಗ್ರಹಿಸುವ ಕಾರಣಕ್ಕಾಗಿ ಗೋಫಂಡ್‌ಮಿ ಎಂಬ ಜಾಲತಾಣವನ್ನು ರಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT