ಮಾಸ್ಕೊ: ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಪೂರಕವಾದ ‘ಸ್ಥಿರತೆ’ಯನ್ನು ಸಾಧ್ಯವಾಗಿಸಿದ್ದಕ್ಕಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಷ್ಯಾದ ತಯಾರಿಕಾ ಘಟಕಗಳನ್ನು ಭಾರತದಲ್ಲಿ ಸ್ಥಾಪಿಸಲು ತಾವು ಸಿದ್ಧರಿರುವುದಾಗಿ ಹೇಳಿದ್ದಾರೆ.

ಮಾಸ್ಕೊದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪುಟಿನ್, ರಷ್ಯಾದ ಮಾರುಕಟ್ಟೆಯಿಂದ ಹೊರ ನಡೆದ ಕೆಲವು ಪಾಶ್ಚಿಮಾತ್ಯ ಬ್ರ್ಯಾಂಡ್ಗಳಿಗೆ ಪರ್ಯಾಯವಾಗಿ ಅಲ್ಲಿನ ಸ್ವದೇಶಿ ಬ್ರ್ಯಾಂಡ್ಗಳು ಮುನ್ನೆಲೆಗೆ ಬಂದಿರುವುದನ್ನು ಉಲ್ಲೇಖಿಸಿದ್ದಾರೆ. ಆಮದು ಮಾಡಿಕೊಳ್ಳುವುದಕ್ಕೆ ಪರ್ಯಾಯಗಳನ್ನು ಕಂಡುಕೊಳ್ಳುವ ಯೋಜನೆಯ ಭಾಗವಾಗಿ ಇದಕ್ಕೆ ಬಹಳ ಮಹತ್ವ ಇದೆ ಎಂದಿದ್ದಾರೆ.

ಆಮದಿಗೆ ಪರ್ಯಾಯ ಕಂಡುಕೊಳ್ಳುವ ರಷ್ಯಾದ ಕ್ರಮವು ಭಾರತದಲ್ಲಿನ ‘ಮೇಕ್ ಇನ್ ಇಂಡಿಯಾ’ ಯೋಜನೆಯಂತೆಯೇ ಇದೆ ಎಂದು ಪುಟಿನ್ ಹೇಳಿದ್ದಾರೆ. ಭಾರತದ ನಾಯಕತ್ವವು ತನ್ನ ಹಿತಾಸಕ್ತಿಗಳಿಗೆ ಆದ್ಯತೆ ನೀಡುವ ನೀತಿಯ ಮೇಲೆ ಗಮನ ಕೇಂದ್ರೀಕರಿಸಿದೆ ಎಂದು ಹೇಳಿದ್ದಾರೆ.

‘ಭಾರತದಲ್ಲಿನ ಅತಿದೊಡ್ಡ ಹೂಡಿಕೆ ಈಚೆಗೆ ಆಗಿದೆ. ರೊಸ್ನೆಫ್ಟ್ ಕಂಪನಿಯು ಅಂದಾಜು 20 ಬಿಲಿಯನ್ ಡಾಲರ್ (ಅಂದಾಜು ₹1.69 ಲಕ್ಷ ಕೋಟಿ) ಹೂಡಿಕೆಯನ್ನು ಭಾರತದಲ್ಲಿ ಮಾಡಿದೆ’ ಎಂದು ಪುಟಿನ್ ತಿಳಿಸಿದ್ದಾರೆ. ರಷ್ಯಾದಲ್ಲಿ ರೊಸ್ನೆಫ್ಟ್ ಕಂಪನಿಯು ಅತಿದೊಡ್ಡ ತೈಲ ಉತ್ಪಾದಕ ಕಂಪನಿಯಾಗಿದೆ.

‘ಭಾರತದ ನಾಯಕತ್ವವು, ಭಾರತ ಮೊದಲು ಎನ್ನುವ ನೀತಿಯನ್ನು ಪಾಲಿಸುತ್ತಿದೆ. ಹೀಗಾಗಿ ಭಾರತದ ಪ್ರಧಾನಿ ಮತ್ತು ಭಾರತದ ಸರ್ಕಾರದ ಅಧಿಕಾರಿಗಳು ಸ್ಥಿರತೆಯನ್ನು ತರುತ್ತಿದ್ದಾರೆ. ಭಾರತದಲ್ಲಿನ ಹೂಡಿಕೆಗಳು ಲಾಭದಾಯಕ ಎಂಬುದು ನಮ್ಮ ನಂಬಿಕೆ’ ಎಂದು ಪುಟಿನ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.