7 ಕೆ.ಜಿ ತೂಕದ ಸಿಡಿತಲೆ ಇರುವ ರಾಕೆಟ್ ಅನ್ನು ಬಳಸಿ ಹನಿಯೆ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ರಾಜಧಾನಿ ಟೆಹ್ರಾನ್‌ನಲ್ಲಿರುವ ಹನಿಯೆ ಅವರ ನಿವಾಸದ ಮೇಲೆ ಗುರಿ ಇಡಲಾಗಿದೆ ಎಂದು ಸೇನೆ ತಿಳಿಸಿದ್ದು, ಅವರ ನಿವಾಸ ಇರುವ ನಿಖರ ಸ್ಥಳವನ್ನು ಬಹಿರಂಗಗೊಳಿಸಲು ನಿರಾಕರಿಸಿದೆ.
‘ಜಿಯೋನಿಸ್ಟ್ ಆಡಳಿತವು ಅಮೆರಿಕದ ಬೆಂಬಲದಿಂದ ಈ ದಾಳಿ ಮಾಡಿದೆ. ಯುದ್ಧಕೋರ, ಭಯೋತ್ಪಾದಕ ಜಿಯೋನಿಸ್ಟ್ ಆಡಳಿತವು ಸೂಕ್ತ ಸಮಯ, ಸ್ಥಳ ಮತ್ತು ಸಾಮರ್ಥ್ಯದಲ್ಲಿ ಕಠಿಣ ಶಿಕ್ಷೆಯನ್ನು ಪಡೆಯಲಿದೆ’ ಎಂದು ಸೇನೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.