ಜೈವಿಕ ಅಸ್ತ್ರವಾಗಿ ಚೀನಾ ಅಭಿವೃದ್ಧಿಪಡಿಸಿದ್ದ ಕೊರೊನಾ ವೈರಸ್ ಅಚಾತುರ್ಯದಿಂದ ಸೋರಿಕೆಯಾಯಿತು ಎಂಬ ವರದಿ ಈಗ ಹರಿದಾಡುತ್ತಿದೆ. ಈ ವಾದವನ್ನು ಮುಂದಿಡುತ್ತಿರುವವರು ಕೆಲವು ಸಮರ್ಥನೆಗಳನ್ನೂ ನೀಡುತ್ತಿದ್ದಾರೆ. ಕೊರೊನಾ ವೈರಸ್ ವಿಚಾರದಲ್ಲಿ ಚೀನಾ ಸರ್ಕಾರ ಆರಂಭದಿಂದಲೇ ಗುಪ್ತ ಗುಪ್ತವಾಗಿ ವರ್ತಿಸಿತು ಎಂಬುದು ಅದರಲ್ಲಿ ಒಂದು.

ಸೋಂಕು ಮೊದಲಿಗೆ ಪತ್ತೆಯಾದ ವುಹಾನ್ ನಗರದಲ್ಲಿಯೇ ವುಹಾನ್ ವೈರಾಲಜಿ ಕೇಂದ್ರ ಇದೆ. ಈ ಕೇಂದ್ರವು ವೈರಸ್ ಮತ್ತು ಸೋಂಕುಗಳ ಬಗ್ಗೆಯೇ ಅಧ್ಯಯನ ನಡೆಸುತ್ತಿದೆ. ಸಾರ್ಸ್ ವೈರಸ್ ಅನ್ನು ಇಲ್ಲಿ ಕಾಪಿಡಲಾಗಿದೆ. ಸಾರ್ಸ್ ವೈರಸ್ ಕೂಡ 2002ರಲ್ಲಿ ಚೀನಾದಿಂದಲೇ ಇತರೆಡೆಗೆ ಹಬ್ಬಿತ್ತು. ವೈರಾಲಜಿ ಕೇಂದ್ರವು ವೈರಸ್ ಬಗ್ಗೆ ಅಧ್ಯಯನ ನಡೆಸುತ್ತಿದೆ ಎಂದು ಮೇಲ್ನೋಟಕ್ಕೆ ಕಂಡರೂ, ಅಲ್ಲಿ ಜೈವಿಕ ಅಸ್ತ್ರಗಳನ್ನು ರೂಪಿಸಲಾಗುತ್ತಿದೆ ಎಂಬುದು ಮತ್ತೊಂದು ಸಮರ್ಥನೆ. ಈ ಬಗ್ಗೆ ಚೀನಾ ಸರ್ಕಾರದಿಂದ ಯಾವುದೇ ಸ್ಪಷ್ಟನೆ ಹೊರಬಿದ್ದಿಲ್ಲ.

ಆದರೆ, ಹಲವು ಮಂದಿ ಪರಿಣತರು ಈ ವಾದವನ್ನು ತಳ್ಳಿ ಹಾಕಿದ್ದಾರೆ. ‘ವೈರಸ್ನ ಲಕ್ಷಣಗಳನ್ನು ಗಮನಿಸಿದರೆ ಅದು ಮಾನವನಿರ್ಮಿತ ಎಂದು ಅನಿಸುವುದಿಲ್ಲ’ ಎಂದು ರಟ್ಗರ್ಸ್ ವಿಶ್ವವಿದ್ಯಾಲಯದ ರಾಸಾಯನಿಕ ಜೀವಶಾಸ್ತ್ರಜ್ಞ ರಿಚರ್ಡ್ ಎಬ್ರೈಟ್ ಹೇಳಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ.

ಹಲವು ವರ್ಷಗಳಿಂದ ನಡೆಸಿದ ಜೈವಿಕ ಅಸ್ತ್ರ ಸಂಶೋಧನೆಯು ಫಲಪ್ರದವಲ್ಲ ಎಂದು ಕಂಡ ಕಾರಣ ಹೆಚ್ಚಿನ ದೇಶಗಳು ಈ ಪ್ರಯತ್ನವನ್ನು ಬಹಳ ಹಿಂದೆಯೇ ಕೈಬಿಟ್ಟಿವೆ. ಹಾಗಾಗಿ, ಈಗಿನ ಬಹುಪಾಲು ಸೋಂಕುಗಳು ನೈಸರ್ಗಿಕ ಎಂದು ಜೈವಿಕ ಸುರಕ್ಷಾ ಪರಿಣತ ಟಿಮ್ ಟ್ರಿವನ್ ಹೇಳಿದ್ದಾಗಿಯೂ ‘ವಾಷಿಂಗ್ಟನ್ ಪೋಸ್ಟ್’ ವರದಿಯಲ್ಲಿ ಇದೆ.

ವುಹಾನ್ ನ್ಯಾಷನಲ್ ಬಯೊಸೇಫ್ಟಿ ಲ್ಯಾಬೊರೇಟರಿಯಿಂದಲೇ ಕೊರೊನಾ ವೈರಸ್ ಸೋರಿಕೆಯಾಗಿರಬಹುದು ಎಂಬ ವರದಿಯು ಬ್ರಿಟನ್ನ ಪತ್ರಿಕೆ ಡೈಲ್ ಮೇಲ್ನಲ್ಲಿ ಕಳೆದ ವಾರವೇ ಪ್ರಕಟವಾಗಿತ್ತು. ಬಳಿಕ, ಇಂತಹುದೇ ವರದಿ ವಾಷಿಂಗ್ಟನ್ ಟೈಮ್ಸ್ನಲ್ಲಿಯೂ ಪ್ರಕಟವಾಗಿದೆ.‘

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.