ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಕೊದಲ್ಲಿ ದಾಳಿ ನಡೆಸಿದ ಉಗ್ರರ ಫೋಟೊ ಬಿಡುಗಡೆ ಮಾಡಿದ ಐಎಸ್ ಸಂಘಟನೆ

Published 24 ಮಾರ್ಚ್ 2024, 3:48 IST
Last Updated 24 ಮಾರ್ಚ್ 2024, 3:48 IST
ಅಕ್ಷರ ಗಾತ್ರ

ಕೈರೊ (ಈಜಿಪ್ಟ್‌): ರಷ್ಯಾ ರಾಜಧಾನಿ ಮಾಸ್ಕೊದ ಸಭಾಂಗಣಕ್ಕೆ ನುಗ್ಗಿ, 143 ನಾಗರಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ ನಾಲ್ವರು ಉಗ್ರರ ಚಿತ್ರವನ್ನು ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಸಂಘಟನೆ ಶನಿವಾರ ಹಂಚಿಕೊಂಡಿದೆ.

'ಇಸ್ಲಾಂ ವಿರುದ್ಧ ಹೋರಾಟ ನಡೆಸುತ್ತಿರುವ ರಾಷ್ಟ್ರಗಳು ಹಾಗೂ ಐಎಸ್‌ ನಡುವಣ ಕದನವು ವಿಪರೀತವಾಗುತ್ತಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ' ಎಂದು ಐಎಸ್‌ ಹೇಳಿರುವುದಾಗಿ ಉಗ್ರ ಸಂಘಟನೆಯ ಸುದ್ದಿ ಸಂಸ್ಥೆ 'ಅಮಾಕ್‌' ವರದಿ ಮಾಡಿದೆ.

ಮಾಸ್ಕೊದ ಅತೀ ದೊಡ್ಡ ಒಳಾಂಗಣ ಸಭಾಂಗಣವಾದ ಕ್ರಾಕಸ್ ಸಿಟಿ ಹಾಲ್‌ನಲ್ಲಿ ಶುಕ್ರವಾರ ರಾತ್ರಿ ಸಂಗೀತ ಕಾರ್ಯಕ್ರಮದ ವೇಳೆ ನುಗ್ಗಿದ ಶಸ್ತ್ರಸಜ್ಜಿತ ಉಗ್ರರು ಮನಬಂದಂತೆ ಗುಂಡು ಹಾರಿಸಿದ್ದರು.

ರಷ್ಯಾ ಇತಿಹಾಸದಲ್ಲಿ ಕಳೆದ ಎರಡು ದಶಕಗಳಲ್ಲೇ ಅತ್ಯಂತ ಭೀಕರವಾದದ್ದು ಎನ್ನಲಾಗುತ್ತಿರುವ ಈ ದಾಳಿಯ ಹೊಣೆಯನ್ನು ಉಗ್ರ ಸಂಘಟನೆ ಐಎಸ್‌ ಹೊತ್ತುಕೊಂಡಿದೆ. ಆದರೆ, ಈ ದಾಳಿಗೂ ಉಕ್ರೇನ್‌ಗೂ ಸಂಬಂಧವಿದೆ ಎಂದು ರಷ್ಯಾ ಆರೋಪಿಸುತ್ತಿದೆ.

ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರು ಸೇರಿದಂತೆ ಒಟ್ಟು 11 ಮಂದಿಯನ್ನು ಇದುವರೆಗೆ ಬಂಧಿಸಲಾಗಿದೆ ಎಂದು ರಷ್ಯಾ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT