ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೆಬನಾನ್‌ನಿಂದ 100ಕ್ಕೂ ಹೆಚ್ಚು ರಾಕೆಟ್ ದಾಳಿ: ಇಸ್ರೇಲ್

Published : 22 ಸೆಪ್ಟೆಂಬರ್ 2024, 6:11 IST
Last Updated : 22 ಸೆಪ್ಟೆಂಬರ್ 2024, 6:11 IST
ಫಾಲೋ ಮಾಡಿ
Comments

ಜೆರುಸಲೇಂ: ಲೆಬನಾನ್‌ನಿಂದ ನೂರಕ್ಕೂ ಹೆಚ್ಚು ರಾಕೆಟ್‌ಗಳನ್ನು ಭಾನುವಾರ ಕೆಲವೇ ಗಂಟೆಗಳಲ್ಲಿ ಹಾರಿಸಲಾಗಿದೆ. ದಾಳಿಯಿಂದಾಗಿ ಆವರಿಸಿರುವ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಇಸ್ರೇಲ್‌ ಸೇನೆ ಹೇಳಿದೆ.

ಕಳೆದ ವರ್ಷ ಗಾಜಾದಲ್ಲಿ ಯುದ್ಧ ಆರಂಭವಾದಾಗಿಂದ ಲೆಬನಾನಿನ ಹಿಜ್ಬುಲ್ಲಾ ಸಂಘಟನೆ ಮತ್ತು ಇಸ್ರೇಲ್‌ ಪಡೆ ನಡುವೆ ನಿರಂತರವಾಗಿ ಗುಂಡಿನ ಚಕಮಕಿ ನಡೆಯುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಗಡಿಯಾಚೆಗಿನ ಸಂಘರ್ಷ ತೀವ್ರಗೊಂಡಿದೆ.

'ಲೆಬನಾನ್‌ನಿಂದ ಸುಮಾರು 20 ರಾಕೆಟ್‌ಗಳನ್ನು ಬೆಳಿಗ್ಗೆ 5ಕ್ಕೂ ಮುನ್ನ ಉಡಾಯಿಸಲಾಗಿದೆ. ನಂತರ 6ರ ಹೊತ್ತಿಗೆ ಅಂದಾಜು 85 ರಾಕೆಟ್‌ಗಳನ್ನು ಹಾರಿಸಲಾಗಿದೆ' ಎಂದು ಸೇನೆ ಹೇಳಿದೆ.

ರಾತ್ರಿಯೂ ನಡೆದಿರುವ ರಾಕೆಟ್‌ ದಾಳಿಯಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್‌ನ ವೈದ್ಯಕೀಯ ತುರ್ತು ಸೇವಾ ಸಂಸ್ಥೆ ಮೇಗನ್‌ ಡೇವಿಡ್‌ ಆ್ಯಡಮ್‌ ತಿಳಿಸಿದೆ.

ಲೆಬನಾನ್‌ ದಾಳಿಯಿಂದ ಎಚ್ಚೆತ್ತುಕೊಂಡಿರುವ ಇಸ್ರೇಲ್‌ ಭದ್ರತಾ ದಳ, ದೇಶದ ಉತ್ತರ ಭಾಗದಲ್ಲಿರುವ ಎಲ್ಲ ಶೈಕ್ಷಣಿಕ ಸಂಸ್ಥೆಗಳನ್ನು ಕನಿಷ್ಠ ಸೋಮವಾರ ಸಂಜೆವರೆಗೆ ಸ್ಥಗಿತಗೊಳಿಸುವಂತೆ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT