ಗಾಜಾ (ಪ್ಯಾಲೆಸ್ಟೀನ್): ಪರಿಹಾರ ಕೇಂದ್ರಗಳಲ್ಲಿ ಆಹಾರಕ್ಕಾಗಿ ಕಾದು ನಿಂತಿದ್ದ ಪ್ಯಾಲೆಸ್ಟೀನಿಯನ್ನರ ಮೇಲೆ ಇಸ್ರೇಲ್ ನಡೆಸಿದ ಗುಂಡಿನ ದಾಳಿಯಲ್ಲಿ 26 ಮಂದಿ ಮೃತಪಟ್ಟು, ಸುಮಾರು 100 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದ ನಾಗರಿಕಾ ರಕ್ಷಣಾ ಏಜೆನ್ಸಿ ಶನಿವಾರ ತಿಳಿಸಿದೆ.
.ಗಾಜಾ ಮೇಲೆ ರಾತ್ರಿಯಿಡೀ ಇಸ್ರೇಲ್ ದಾಳಿ: ಕನಿಷ್ಠ 31 ಜನರ ಸಾವು.
ಆಹಾರಕ್ಕಾಗಿ ಕಾಯುತ್ತಿರುವ ನಿರಾಶ್ರಿತರ ಮೇಲೆ ಪದೇ ಪದೇ ದಾಳಿ ನಡೆಯುತ್ತಿದ್ದು, ಇಸ್ರೇಲ್ ಈ ಕೃತ್ಯ ನಡೆಸುತ್ತಿದೆ ಎಂದು ಗಾಜಾದ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಇದು ಹಮಾಸ್ ಬಂಡಕೋರರ ಕೃತ್ಯ ಎಂದು ಸ್ಥಳದಲ್ಲಿ ನೆರವು ನೀಡುತ್ತಿರುವ ಅಮೆರಿಕ ಹಾಗೂ ಇಸ್ರೇಲ್ ಬೆಂಬಲಿತ ಗಾಜಾ ಹ್ಯುಮನಿಟೇರಿಯನ್ ಫೌಂಡೇಷನ್ (ಜಿಎಚ್ಎಫ್) ಹೇಳಿದೆ.

ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಇಸ್ರೇಲ್ ಸೇನೆ ಹೇಳಿದೆ.
.ಗಾಜಾ: ವೈಮಾನಿಕ ದಾಳಿ, 94 ಮಂದಿ ಸಾವು.
ಖಾನ್ ಯೂನಿಸ್ನ ನೈಋತ್ಯಕ್ಕೆ ಮತ್ತು ರಫಾದ ವಾಯುವ್ಯಕ್ಕೆ ಇರುವ ಮತ್ತೊಂದು ಕೇಂದ್ರದ ಬಳಿ ಈ ಸಾವುಗಳು ಸಂಭವಿಸಿವೆ ಎಂದು ನಾಗರಿಕ ರಕ್ಷಣಾ ಸಂಸ್ಥೆಯ ವಕ್ತಾರ ಮಹ್ಮದ್ ಬಸ್ಸಲ್ ಹೇಳಿದ್ದಾರೆ. ಎರಡೂ ಪ್ರಕರಣಗಳು ಇಸ್ರೇಲ್ ಗುಂಡಿನ ದಾಳಿಯಿಂದ ಉಂಟಾಗಿವೆ ಎಂದು ಅವರು ಹೇಳಿದ್ದಾರೆ.

ಆಹಾರ ಪಡೆಯಲೆಂದು ಖಾನ್ ಯೂನಿಸ್ನ ಅಲ್ಟಿನಾಗೆ ಬೆಳಗಿನ ಜಾವ ಐವರು ಸಂಬಂಧಿಕರೊಂದಿಗೆ ತೆರಳಿದ್ದಾಗ ಇಸ್ರೇಲಿ ಸೈನಿಕರು ಗುಂಡಿನ ದಾಳಿ ನಡೆಸಲು ಪ್ರಾರಂಭಿಸಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
.ಗಾಜಾ | ಯೋಧರಿದ್ದ ವಾಹನದ ಮೇಲೆ ದಾಳಿ; ಇಸ್ರೇಲ್ನ 7 ಸೈನಿಕರ ಸಾವು.
ನನಗೆ ಹಾಗೂ ನನ್ನ ಸಂಬಂಧಿಕರಿಗೆ ಅಲ್ಲಿ ಏನನ್ನೂ ಪಡೆಯಲು ಸಾಧ್ಯವಾಗಿಲ್ಲ. ನಾನು ಪ್ರತಿದಿನ ಅಲ್ಲಿಗೆ ಹೋಗುತ್ತೇನೆ. ಆದರೆ ನಮಗೆ ಆಹಾರದ ಬದಲು ಸಿಗುವುದು ಗುಂಡುಗಳು ಮತ್ತು ಬಳಲಿಕೆ ಮಾತ್ರ ಎಂದು 37 ವರ್ಷದ ಅಬ್ದುಲ್ ಅಜೀಜ್ ನೋವು ತೋಡಿಕೊಂಡಿದ್ದಾರೆ.

ಇತರ ಮೂವರು ಪ್ರತ್ಯಕ್ಷದರ್ಶಿಗಳು ಸಹ ಇಸ್ರೇಲ್ ಪಡೆಗಳು ಗುಂಡು ಹಾರಿಸುತ್ತಿವೆ ಎಂದು ಆರೋಪಿಸಿದ್ದಾರೆ.

‘ಅವರು ನಮ್ಮ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು. ನಾವು ನೆಲದ ಮೇಲೆ ಮಲಗಿದೆವು. ಟ್ಯಾಂಕ್ಗಳು ಮತ್ತು ಜೀಪ್ಗಳು ಬಂದವು, ಅವುಗಳಿಂದ ಹೊರಬಂದ ಸೈನಿಕರು ಗುಂಡಿನ ದಾಳಿ ನಡೆಸಲು ಪ್ರಾರಂಭಿಸಿದರು’ ಎಂದು 24 ವರ್ಷದ ಟ್ಯಾಮರ್ ಅಬು ಅಕರ್ ತಿಳಿಸಿದ್ದಾರೆ.

(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)
.ಗಾಜಾ | ಪರಿಹಾರ ವಿತರಣಾ ಕೇಂದ್ರದ ಮೇಲೆ ದಾಳಿ: ಮೂವರ ಸಾವು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.