ಜೆರುಸಲೇಮ್: ಇರಾನ್ ಮೇಲಿನ ದಾಳಿಯನ್ನು ಇಸ್ರೇಲ್ ಭಾನುವಾರವೂ ತೀವ್ರಗೊಳಿಸಿದೆ. ಇದಕ್ಕೆ ಪ್ರತಿಯಾಗಿ, ಇಸ್ರೇಲ್ನ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿ ಇರಾನ್ ಕೂಡ ದಾಳಿ ನಡೆಸಿದ್ದು, ಸಂಘರ್ಷ ತೀವ್ರಗೊಂಡಿದೆ.

ಇತ್ತ ಇರಾನ್ನ ಡೆಜ್ಫುಲ್ ವಿಮಾನ ನಿಲ್ದಾಣದಲ್ಲಿ ಎರಡು ಎಫ್-5 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಇಸ್ರೇಲ್ ಹೇಳಿದೆ.

ಎಫ್-5 ಯುದ್ಧ ವಿಮಾನಗಳು ಇರಾನ್ನ ಹಳೆಯ ಫೈಟರ್ ಜೆಟ್ಗಳ ಭಾಗವಾಗಿವೆ. ಇರಾನ್ನ ವಿಮಾನಗಳನ್ನು ನಾಶಪಡಿಸಿದ ವಿಡಿಯೊವನ್ನು ಇಸ್ರೇಲ್ ಬಿಡುಗಡೆ ಮಾಡಿದೆ. ಇದಕ್ಕೂ ಮುನ್ನ ಇಸ್ರೇಲ್, ಇರಾನ್ ಸೇನೆ ಹಾರಿಸಿದ ಎಫ್-14 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿತ್ತು.

ಇಸ್ಫಹಾನ್ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳನ್ನು ಒಳಗೊಂಡಂತೆ ಇತರ ಸ್ಥಳಗಳ ಮೇಲೆ ದಾಳಿ ಮಾಡಿರುವುದಾಗಿ ಇಸ್ರೇಲ್ ಹೇಳಿದೆ. ಯುದ್ಧದಲ್ಲಿ ವಿಮಾನಗಳು ಅಥವಾ ಇತರ ಸಾಮಗ್ರಿಗಳ ನಷ್ಟವನ್ನು ಇರಾನ್ ಅಧಿಕೃತವಾಗಿ ಒಪ್ಪಿಕೊಂಡಿಲ್ಲ.

ಏತನ್ಮಧ್ಯೆ, ಭಾನುವಾರ ಬೆಳಿಗ್ಗೆ ಇಸ್ರೇಲ್ ಮೇಲೆ 40 ಕ್ಷಿಪಣಿಗಳನ್ನು ಉಡಾಯಿಸಿರುವುದಾಗಿ ಇರಾನ್ನ ಅರೆಸೈನಿಕ ಕ್ರಾಂತಿಕಾರಿ ಗಾರ್ಡ್ ಹೇಳಿದೆ.
.ಇರಾನ್ ವಿರುದ್ಧ ಸುದೀರ್ಘ ಯುದ್ಧ: ಇಸ್ರೇಲ್.ಇರಾನ್ ಮೇಲೆ ಅಮೆರಿಕ ದಾಳಿ; ವಿಶ್ವಸಂಸ್ಥೆ ತೀವ್ರ ಕಳವಳ.ಇರಾನ್ ಅಣ್ವಸ್ತ್ರ ನೆಲೆ ಧ್ವಂಸಗೊಳಿಸಲು ಅಮೆರಿಕದಿಂದ ಶಕ್ತಿಶಾಲಿ B2 ಬಾಂಬರ್ ಬಳಕೆ.ಇರಾನ್ ಅಣು ಕೇಂದ್ರಗಳ ಮೇಲೆ ಅಮೆರಿಕ ಬಾಂಬ್ ದಾಳಿ: ಟ್ರಂಪ್ ನಡೆ ಹೊಗಳಿದ ನೆತನ್ಯಾಹು.'ಮಿ.ಟ್ರಂಪ್ ನೀವು ಆರಂಭಿಸಿದ್ದೀರಿ, ನಾವು ಅಂತ್ಯಗೊಳಿಸುತ್ತೇವೆ': ಇರಾನ್ ಮಾಧ್ಯಮ.ಆಳ ಅಗಲ: ಏಕಾಂಗಿಯಾದ ಇರಾನ್? ನೆರವಿಗೆ ಧಾವಿಸದ ಚೀನಾ, ರಷ್ಯಾ.. ಮುಂದೇನು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.