ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿ ಸ್ಥಾಪನೆಯಾಗಬೇಕಾದರೆ ಹಮಾಸ್ ನಾಶವಾಗಬೇಕು: ಇಸ್ರೇಲ್‌ ಪ್ರಧಾನಿ ನೆತನ್ಯಾಹು

Published 26 ಡಿಸೆಂಬರ್ 2023, 7:19 IST
Last Updated 26 ಡಿಸೆಂಬರ್ 2023, 7:19 IST
ಅಕ್ಷರ ಗಾತ್ರ

ಗಾಜಾ: ಕದನ ವಿರಾಮ ಘೋಷಿಸುವಂತೆ ಅಂತರರಾಷ್ಟ್ರೀಯ ಸಮುದಾಯ ಕರೆ ನೀಡುತ್ತಿರುವುದನ್ನು ಧಿಕ್ಕರಿಸಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಹಮಾಸ್‌ ಸರ್ವನಾಶವಾಗುವವರೆಗೆ ದಾಳಿ ಮುಂದುವರಿಸುವುದಾಗಿ ಮತ್ತೊಮ್ಮೆ ಹೇಳಿದ್ದಾರೆ.

ಉತ್ತರ ಗಾಜಾದಲ್ಲಿರುವ ‌ಇಸ್ರೇಲ್‌ ಪಡೆಗಳ ಶಿಬಿರಕ್ಕೆ ಸೋಮವಾರ ಭೇಟಿ ನೀಡಿದ ಬೆಂಜಮಿನ್‌, ಸರ್ಕಾರವು ಶೀಘ್ರದಲ್ಲೇ ಯುದ್ಧವನ್ನು ನಿಲ್ಲಿಸಲಿದೆ ಎಂದು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಯನ್ನು ಅಲ್ಲಗಳೆದಿದ್ದಾರೆ.

ಇದೇ ವೇಳೆ ಅವರು, ಸೇನಾ ಒತ್ತಡ ಹೇರದಿದ್ದರೆ, ಹಮಾಸ್‌ ಒತ್ತೆ ಇರಿಸಿಕೊಂಡಿರುವ ಇಸ್ರೇಲ್‌ ನಾಗರಿಕರನ್ನು ಮುಕ್ತಗೊಳಿಸಲು ಸಾಧ್ಯವೇ ಇಲ್ಲ. ನಾವು ದಾಳಿ ನಿಲ್ಲಿಸುವುದಿಲ್ಲ. ಕೊನೆವರೆಗೂ ಯುದ್ಧ ಮುಂದುವರಿಸುತ್ತೇವೆ ಎಂದಿದ್ದಾರೆ.

'ವಾಲ್‌ ಸ್ಟ್ರೀಟ್‌ ಜರ್ನಲ್‌' ಸೋಮವಾರ ಪ್ರಕಟಿಸಿರುವ ಸಂಪಾದಕೀಯದಲ್ಲಿ, 'ಶಾಂತಿ ಸ್ಥಾಪನೆಯಾಗಬೇಕಾದರೆ, ಹಮಾಸ್‌ ಸಂಪೂರ್ಣ ನಾಶವಾಗಬೇಕು, ಗಾಜಾ ನಿಶಸ್ತ್ರೀಕರಣಗೊಳ್ಳಬೇಕು ಮತ್ತು ಪ್ಯಾಲೆಸ್ಟೀನ್‌ ಸಮುದಾಯ ನಿರ್ಮೂಲನೆಗೊಳ್ಳಬೇಕು' ಎಂದು ನೆತನ್ಯಾಹು ಹೇಳಿರುವುದಾಗಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT