ಟೋಕಿಯೊ: ಜಪಾನ್ ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ, ಲಿಬರಲ್ ಡೆಮಾಕ್ರಟಿಕ್ ಪಕ್ಷದ ಕಟ್ಟಾ ಸಂಪ್ರದಾಯವಾದಿ ಸನೇ ತಕೈಚಿ (64) ಅವರನ್ನು ಸಂಸತ್ತು ಮಂಗಳವಾರ ಆಯ್ಕೆ ಮಾಡಿತು.

ಪ್ರಧಾನಿಯಾಗಿ ಕೇವಲ ಒಂದು ವರ್ಷ ಸೇವೆ ಸಲ್ಲಿಸಿದ ಶಿಗೇರು ಇಶಿಬಾ ಅವರ ನೇತೃತ್ವದಲ್ಲಿ ಲಿಬರಲ್ ಡೆಮಾಕ್ರಟಿಕ್ ಪಕ್ಷ ನಿರಂತರ ಸೋಲುಗಳನ್ನು ಕಂಡಿತು. ಈ ಕಾರಣದಿಂದ ಬೇಸತ್ತ ಅವರು ಸಂಪುಟಕ್ಕೆ ಬೆಳಿಗ್ಗೆ ರಾಜೀನಾಮೆ ನೀಡಿ, ತಮ್ಮ ಉತ್ತರಾಧಿಕಾರಿ ಆಯ್ಕೆಗೆ ದಾರಿ ಮಾಡಿಕೊಟ್ಟರು.

ಇತರ ಪಾಲುದಾರರ ಜತೆ ಲಿಬರಲ್ ಡೆಮಾಕ್ರಟಿಕ್ ಪಕ್ಷವು ಮೈತ್ರಿ ಒಪ್ಪಂದವನ್ನು ಮಾಡಿಕೊಂಡ ಬಳಿಕ ಸನೇ ತಕೈಚಿ ಅವರ ಆಯ್ಕೆಯಾಗಿದೆ.

ಜಪಾನಿನ ಕೆಳಮನೆಯಲ್ಲಿ ತಕೈಚಿ ಅವರು 237 ಮತಗಳನ್ನು ಪಡೆದರೆ, ಅವರ ವಿರುದ್ಧ ಸ್ಪರ್ಧಿಸಿದ್ದ ವಿರೋಧ ಪಕ್ಷ ‘ಕಾನ್ಸ್ಟಿಟ್ಯೂಷನಲ್ ಡೆಮಾಕ್ರಟಿಕ್ ಪಕ್ಷ’ದ ಮುಖ್ಯ ಯೋಶಿಕೊಕೊ ನೋಡಾ ಅವರು 149 ಮತಗಳನ್ನು ಪಡೆದರು. ಫಲಿತಾಂಶ ಪ್ರಕಟವಾದ ಕೂಡಲೇ ತಕೈಚಿ ಅವರು ಎದ್ದುನಿಂತು ಎಲ್ಲರಿಗೂ ವಂದಿಸಿದರು.

ವಿರೋಧ ಪಕ್ಷಗಳಲ್ಲಿ ಒಗ್ಗಟ್ಟು ಇಲ್ಲದೇ ಇದ್ದದ್ದು ತಕೈಚಿ ಆಯ್ಕೆಗೆ ವರದಾನವಾಯಿತು. ಎಲ್ಡಿಪಿಯು ಒಸಾಕಾ ಮೂಲದ ಬಲಪಂಥೀಯ ‘ಜಪಾನ್ ಇನ್ನೋವೇಷನ್ ಪಾರ್ಟಿ’ (ಜೆಐಪಿ) ಜತೆ ಮೈತ್ರಿ ಮಾಡಿಕೊಂಡು, ಪ್ರಧಾನಿ ಆಯ್ಕೆಯನ್ನು ಖಚಿತಪಡಿಸಿಕೊಂಡಿತು.

ತಕೈಚಿ ಅವರು ಈ ವಾರದ ಕೊನೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತುಕತೆ ಮತ್ತು ಪ್ರಾದೇಶಿಕ ಶೃಂಗಸಭೆಗಳಲ್ಲಿ ಭಾಗವಹಿಸಬೇಕಿದೆ. ಅಲ್ಲದೆ ಡಿಸೆಂಬರ್ ಅಂತ್ಯದ ವೇಳೆಗೆ ಅವರು ಬೆಲೆ ಏರಿಕೆಯನ್ನು ತ್ವರಿತವಾಗಿ ನಿಯಂತ್ರಣಕ್ಕೆ ತರಬೇಕಿದೆ, ಇದಕ್ಕಾಗಿ ಆರ್ಥಿಕ ಚಟುವಟಿಕೆಗೆ ಚುರುಕು ಮೂಡಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.
.ಜಪಾನ್ನ ಮೊದಲ ಮಹಿಳಾ ಪ್ರಧಾನಿಯಾಗಿ ಸನೆ ತಾಕೈಚಿ?.ಜಪಾನ್ನ ಮೊದಲ ಮಹಿಳಾ ಪ್ರಧಾನಿಯಾಗುವತ್ತ ಸನೆ ತಾಕೈಚಿ