ಆಸ್ಟಿನ್, ಅಮೆರಿಕ: ಗರ್ಭಪಾತ ಹಕ್ಕನ್ನು ನಿರ್ಬಂಧಿಸುವ ಟೆಕ್ಸಾಸ್ನ ಕಠಿಣ ಕಾನೂನಿಗೆ ತಡೆ ನೀಡಬೇಕು ಎಂದು ಜೋ ಬೈಡನ್ ನೇತೃತ್ವದ ಸರ್ಕಾರವು ಶುಕ್ರವಾರ ಫೆಡರಲ್ ಕೋರ್ಟ್ನ ನ್ಯಾಯಾಧೀಶರನ್ನು ಒತ್ತಾಯಿಸಿದೆ.

ಸೆಪ್ಟೆಂಬರ್ ಆರಂಭದಲ್ಲಿ ಈ ಕಾಯ್ದೆ ಜಾರಿಯಾಗಿದ್ದು, ಗರ್ಭಪಾತವನ್ನು ನಿರ್ಬಂಧಿಸಲಾಗಿದೆ. ಗರ್ಭಪಾತ ಕಾನೂನನ್ನೂ ತಡೆಹಿಡಿದರೂ ಟೆಕ್ಸಾಸ್ನಲ್ಲಿ ಗರ್ಭಪಾತಕ್ಕೆ ನೆರವಾಗುವ ಸೇವೆಗಳು ಕೂಡಲೇ ಪ್ರಾರಂಭವಾಗುವುದಿಲ್ಲ ಎನ್ನಲಾಗಿದೆ. ಕಾಯ್ದೆ ಪರಿಣಾಮ ಎದುರಿಸಬೇಕಾದಿತು ಎಂಬ ವೈದ್ಯರ ಆತಂಕ ಇದಕ್ಕೆ ಕಾರಣ ಎನ್ನಲಾಗಿದೆ.

ಓದಿ:ನಾನು ಭಾರತದ ಕೋವಿಶೀಲ್ಡ್ ಲಸಿಕೆ ಪಡೆದಿದ್ದೇನೆ: ಅಬ್ದುಲ್ಲಾ ಶಾಹೀದ್ ಹೇಳಿಕೆ

ಭ್ರೂಣದಲ್ಲಿ ಹೃದಯಚಟುವಟಿಕೆ ಪತ್ತೆಯಾದ ಬಳಿಕ ಗರ್ಭಪಾತ ನಡೆಸುವುದನ್ನು ಉಲ್ಲೇಖಿತ ಕಾಯ್ದೆ ನಿಷೇಧಿಸಲಿದೆ. ಉಲ್ಲಂಘನೆ ಪ್ರಕರಣಗಳಿದ್ದಲ್ಲಿ ಖಾಸಗಿಯವರು ಮೊಕದ್ದಮೆ ಹೂಡಲು ಅವಕಾಶವಿದೆ. ಆರೋಪ ಸಾಬೀತಾದರೆ 10 ಸಾವಿರ ಅಮೆರಿಕ ಡಾಲರ್ ದಂಡ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ.

ಗರ್ಭಪಾತ ಕುರಿತಂತೆ ಮಹಿಳೆಯರ ಸಾಂವಿಧಾನಿಕ ಹಕ್ಕಿನ ಮೇಲೆ ಈ ಕಾಯ್ದೆಯ ಮೂಲಕ ಟೆಕ್ಸಾಸ್ ದಾಳಿ ನಡೆಸಿದೆ ಎಂದು ಜೋ ಬೈಡನ್ ನೇತೃತ್ವದ ಸರ್ಕಾರವು ಆಕ್ರೋಶ ವ್ಯಕ್ತಪಡಿಸಿದೆ.

‘ಒಂದು ರಾಜ್ಯ ಆರು ವಾರಗಳವರೆಗೆ ಗರ್ಭಪಾತದ ಹಕ್ಕನ್ನು ನಿಷೇಧಿಸಬಾರದು. ಇದು ತಿಳಿದಿದ್ದರೂ ಟೆಕ್ಸಾಸ್ ಕಾನೂನು ರೂಪಿಸಿದೆ’ ಎಂದು ನ್ಯಾಯಾಂಗ ಇಲಾಖೆಯ ವಕೀಲ ಅಟಾರ್ನಿ ಬ್ರಿಯಾನ್ ನೆಟ್ಟರ್ ಅವರು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.