ವಾಷಿಂಗ್ಟನ್: ಅಮೆರಿಕದ ಶಸ್ತ್ರಾಸ್ತ್ರಗಳನ್ನು ರಷ್ಯಾದ ಭೌಗೋಳಿಕ ಪ್ರದೇಶವನ್ನು ಗುರಿಯಾಗಿಸಿ ಬಳಸುವುದಕ್ಕೆ ಸಂಬಂಧಿಸಿದಂತೆ ಉಕ್ರೇನ್‌ನ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ಜೋ ಬೈಡನ್ ಆಡಳಿತವು ಶುಕ್ರವಾರ ಭಾಗಶಃ ತೆರವುಗೊಳಿಸಿದೆ.

ಉಕ್ರೇನ್ ತನ್ನ ಹಾರ್ಕಿವ್ ನಗರವನ್ನು ರಕ್ಷಿಸಿಕೊಳ್ಳುವುದಕ್ಕೆ ಪೂರಕವಾಗಿ ಮಾತ್ರ ಈ ನಿರ್ಬಂಧವನ್ನು ಸಡಿಲಿಸಲಾಗಿದೆ ಎಂದು ಈ ಬೆಳವಣಿಗೆಗಳನ್ನು ಹತ್ತಿರದಿಂದ ಬಲ್ಲ ಅಧಿಕಾರಿಗಳು ದೃಢಪಡಿಸಿದ್ದಾರೆ.

ದೂರಗಾಮಿ ಕ್ಷಿಪಣಿಗಳು ಹಾಗೂ ಇತರೆ ಪ್ರಮುಖ ಶಸ್ತ್ರಾಸ್ತ್ರಗಳನ್ನು ರಷ್ಯಾದ ಒಳಭಾಗವನ್ನು ಗುರಿಯಾಗಿ ಬಳಸುವುದಕ್ಕೆ ವಿಧಿಸಲಾಗಿದ್ದ ನಿರ್ಬಂಧದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಉಕ್ರೇನ್ ಅಧಿಕಾರಿಗಳು ಅಮೆರಿಕದ ಆಡಳಿತದ ಜೊತೆಗೆ ನಡೆಸಿದ ಮಾತುಕತೆ ಹಿಂದೆಯೇ ಈ ತೀರ್ಮಾನ ಹೊರಬಿದ್ದಿದೆ. ಉಕ್ರೇನ್‌ನ ಎರಡನೇ ಅತಿ ದೊಡ್ಡ ನಗರವಾಗಿರುವ ಹಾರ್ಕಿವ್, ರಷ್ಯಾದ ಗಡಿ ಭಾಗದಿಂದ ಕೇವಲ 20 ಕಿ.ಮೀ. ದೂರದಲ್ಲಿದೆ. ರಷ್ಯಾ ಈ ನಗರವನ್ನು ಗುರಿಯಾಗಿಸಿ ಹೆಚ್ಚು ದಾಳಿ ನಡೆಸುತ್ತಿದ್ದು, ಅತಿಕ್ರಮಣ ತೀವ್ರಗೊಳಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.