ಒಟ್ಟಾವ: ಕನಿಷ್ಠ ಎರಡು ಖಾಲಿಸ್ತಾನಿ ಭಯೋತ್ಪಾದಕ ಸಂಘಟನೆಗಳು ಕೆನಡಾದಿಂದ ಆರ್ಥಿಕ ನೆರವು ಪಡೆದಿವೆ ಎಂದು ಕೆನಡಾ ಸರ್ಕಾರದ ವರದಿಯೊಂದು ತಿಳಿಸಿದೆ.

‘ಕೆನಡಾದಲ್ಲಿ ಹಣದ ಅಕ್ರಮ ಚಲಾವಣೆ ಮತ್ತು ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡುತ್ತಿರುವುದರಿಂದ ಸೃಷ್ಟಿಯಾಗಿರುವ ಅಪಾಯಗಳು– 2025 ಮೌಲ್ಯಮಾಪನ’ ಎಂಬ ಶೀರ್ಷಿಕೆಯ ವರದಿಯಲ್ಲಿ ಈ ಉಲ್ಲೇಖವಿದೆ.

ಬಬ್ಬರ್ ಖಾಲ್ಸಾ ಹಾಗೂ ಸಿಖ್ ಯೂತ್ ಫೆಡರೇಷನ್ ಭಯೋತ್ಪಾದಕ ಸಂಘಟನೆಗಳು ಕೆನಡಾದಲ್ಲಿ ಹಣ ಸಂಗ್ರಹಿಸುತ್ತಿವೆ ಎಂದು ವರದಿ ತಿಳಿಸಿದೆ.

‘ಭಾರತದ ಪಂಜಾಬ್ ಅನ್ನು ಖಾಲಿಸ್ತಾನ್ ಎಂಬ ಸ್ವತಂತ್ರ ರಾಷ್ಟ್ರದ ನಿರ್ಮಾಣಕ್ಕಾಗಿ ಕೆನಡಾದಲ್ಲಿ 1980ರ ದಶಕದಿಂದಲೂ ರಾಜಕೀಯ ಪ್ರೇರಿತ ಹಿಂಸಾತ್ಮಕ ಚಟುವಟಿಕೆಗಳನ್ನು ಖಾಲಿಸ್ತಾನಿ ಉಗ್ರರು ನಡೆಸಿದ್ದಾರೆ’ ಎಂದು ಒಟ್ಟಾವದ ಗುಪ್ತಚರ ಸಂಸ್ಥೆಯು ವರದಿ ನೀಡಿದ ಎರಡು ತಿಂಗಳ ಬಳಿಕ ಈ ವಿದ್ಯಮಾನ ನಡೆದಿದೆ.

‘ರಾಜಕೀಯ ಪ್ರೇರಿತ ಹಿಂಸಾತ್ಮಕ ಉಗ್ರವಾದವು (ಪಿಎಂವಿಇ) ನೂತನ ರಾಜಕೀಯ ವ್ಯವಸ್ಥೆ ರೂಪಿಸಲು ಅಥವಾ ಅಸ್ತಿತ್ವದಲ್ಲಿರುವ ವ್ಯವಸ್ಥೆಯಲ್ಲೇ ಹೊಸ ರಚನೆಗಾಗಿ ಹಿಂಸಾಚಾರವನ್ನು ಪ್ರೋತ್ಸಾಹಿಸಲಿದೆ’ ಎಂದು ಈಚಿನ ವರದಿಯು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.