ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಸ್‌ವರ್ಡ್ ಕಳೆದುಕೊಂಡು ಪರಿತಪಿಸುತ್ತಿರುವ ಬಿಟ್‌ಕಾಯಿನ್ ದೊರೆಗಳು..!

Last Updated 13 ಜನವರಿ 2021, 5:58 IST
ಅಕ್ಷರ ಗಾತ್ರ

ನ್ಯೂಯಾರ್ಕ್:ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿ ಬಿಟ್‌ಕಾಯಿನ್ ವಹಿವಾಟು ಎನ್ನುವುದು ಇಂದು ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಬಿಟ್‌ಕಾಯಿನ್ ಮೌಲ್ಯ ಏರಿಳಿಕೆಗೂ ಸುದ್ದಿಯಾಗುತ್ತಿರುತ್ತದೆ. ಅಲ್ಲದೆ, ಕೆಲವೊಂದು ಸೈಬರ್ ವಂಚನೆ ಪ್ರಕರಣದಲ್ಲಿ ಕೂಡ ಬಿಟ್‌ಕಾಯಿನ್ ಹೆಸರು ಕೇಳಿಬರುತ್ತಿದೆ. ಹೀಗೆ ಹಲವು ಸ್ವರೂಪ ಹೊಂದಿರುವ ಬಿಟ್‌ಕಾಯಿನ್ ವಹಿವಾಟಿನಲ್ಲಿ ತೊಡಗಿಸಿಕೊಂಡಿರುವವರು ಈಗ ಪಾಸ್‌ವರ್ಡ್ ಮರೆತು ಕೋಟಿಗಟ್ಟಲೆ ಮೌಲ್ಯದ ಬಿಟ್‌ಕಾಯಿನ್ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.

ಸ್ಯಾನ್ ಪ್ರಾನ್ಸಿಸ್ಕೊದಲ್ಲಿರುವ ಜರ್ಮನಿ ಮೂಲದ ಪ್ರೋಗ್ರಾಮರ್ ಸ್ಟೀಫನ್ ಥಾಮಸ್, 220 ಮಿಲಿಯನ್ ಮೌಲ್ಯದ ಬಿಟ್‌ಕಾಯಿನ್ ಹೊಂದಿದ್ದಾರೆ. ಆದರೆ ಪಾಸ್‌ವರ್ಡ್ ಮರೆತುಹೋಗಿರುವುದು ಆವರಿಗೆ ಸಮಸ್ಯೆಯಾಗಿದ್ದು, ಇನ್ನು ಎರಡೇ ಪಾಸ್‌ವರ್ಡ್ ರಿಕವರಿ ಆಯ್ಕೆಗಳು ಉಳಿದಿವೆಯಂತೆ.. ಅದು ಕೂಡ ತಪ್ಪಾದರೆ, ಮತ್ತೆಂದೂ ಸ್ಟೀಫನ್‌ಗೆ ಬಿಟ್‌ಕಾಯಿನ್ ದೊರೆಯುವುದಿಲ್ಲ. ಐರಾನ್‌ಕೀ ಡಿಜಿಟಲ್ ವ್ಯಾಲೆಟ್ ಪಾಸ್‌ವರ್ಡ್ ಇಲ್ಲದಿರುವುದರಿಂದ ಅವರು ಸಮಸ್ಯೆಗೆ ಸಿಲುಕಿದ್ದಾರೆ.

ಸ್ಟೀಫನ್ ಮಾತ್ರವಲ್ಲದೆ, ಬಹಳಷ್ಟು ಮಂದಿ ಬಿಟ್‌ಕಾಯಿನ್ ಹೊಂದಿರುವವರು ಪಾಸ್‌ವರ್ಡ್ ಮರೆತುಬಿಟ್ಟಿದ್ದಾರೆ. ಮರಳಿ ಲಾಗಿನ್ ಆಗಲು ಯತ್ನಿಸುತ್ತಿದ್ದರೂ, ಸಾಧ್ಯವಾಗದೇ ಹತಾಶರಾಗಿ ಕೈಚೆಲುತ್ತಿದ್ದಾರೆ. ಚಾಲ್ತಿಯಲ್ಲಿರುವ 18.5 ಮಿಲಿಯನ್ ಬಿಟ್‌ಕಾಯಿನ್ ಪೈಕಿ, ಸುಮಾರು ಶೇ 20 ಅಂದರೆ, 140 ಬಿಲಿಯನ್ ಡಾಲರ್ ಮೌಲ್ಯದ ಬಿಟ್‌ಕಾಯಿನ್, ಕಳೆದುಹೋಗಿರುವ ಇಲ್ಲವೆ ಪಾಸ್‌ವರ್ಡ್ ಇಲ್ಲದೆ ಸ್ತಬ್ಧವಾಗಿರುವ ಸಾಧ್ಯತೆಯಿದೆ ಎಂದು ಕ್ರಿಪ್ಟೋಕರೆನ್ಸಿ ಡಾಟಾ ಫರ್ಮ್ ಚೈನ್‌ಅನಾಲಿಸಿಸ್ ಹೇಳಿದೆ.

ಡಿಜಿಟಲ್ ಪಾಸ್‌ವರ್ಡ್ ವ್ಯಾಲೆಟ್ ರಿಕವರಿ ಸೇವೆ ಒದಗಿಸುವ ಸಂಸ್ಥೆಯೊಂದು ಕೂಡ ಕಳೆದೊಂದು ತಿಂಗಳಿನಲ್ಲಿಯೇ 70 ಕೋರಿಕೆಯನ್ನು ಸ್ವೀಕರಿಸಿರುವುದಾಗಿ ಹೇಳಿದೆ. ಅಲ್ಲದೆ, ಪಾಸ್‌ವರ್ಡ್ ಒದಗಿಸಲು ಮತ್ತು ಸಂಗ್ರಹಿಸಲು ಬಿಟ್‌ಕಾಯಿನ್ ಬಳಿ ಯಾವುದೇ ಕಂಪನಿ ಅಥವಾ ವ್ಯವಸ್ಥೆ ಇಲ್ಲದಿರುವುದೂ ಕಾರಣವಾಗಿದೆ. ಹೀಗಾಗಿ ಕೋಟಿಗಟ್ಟಲೆ ಮೌಲ್ಯದ ಬಿಟ್‌ಕಾಯಿನ್ ಇದ್ದರೂ, ಅದನ್ನು ಬಳಸಲಾಗದೇ ಮತ್ತು ಇರಿಸಿಕೊಳ್ಳಲೂ ಆಗದೇ ಪರದಾಡುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT