ವಾಷಿಂಗ್ಟನ್: ‘ಮಾಸ್ಕ್ ಧರಿಸುವುದು ಲಸಿಕೆಗಿಂತಲೂ ಹೆಚ್ಚು ಪರಿಣಾಮಕಾರಿ’ ಎಂದು ಅಮೆರಿಕದ ಸೋಂಕು ನಿಯಂತ್ರಣ ಮತ್ತು ತಡೆ ಕೇಂದ್ರದ ನಿರ್ದೇಶಕ ರಾಬೆರ್ಟ್ ರೆಡ್‌ಫೀಲ್ಡ್ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಆದರೆ, ಇದಕ್ಕೆ ತದ್ವಿರುದ್ಧವಾಗಿ ಮಾತನಾಡಿರುವ ಆ ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಮಾಸ್ಕ್ ಅಷ್ಟೇನೂ ಪರಿಣಾಮಕಾರಿಯಲ್ಲ’ ಎಂದಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಾಬರ್ಟ್, ‘ನಾವು ಕೋವಿಡ್–19 ಲಸಿಕೆ ತೆಗೆದುಕೊಳ್ಳುವುದಕ್ಕಿಂತಲೂ ಮಾಸ್ಕ್ ಧರಿಸುವುದು ಉತ್ತಮ ಎಂದು ಖಚಿತವಾಗಿ ಹೇಳಬಹುದು. ಏಕೆಂದರೆ, ಲಸಿಕೆ ಪಡೆಯುವುದರಿಂದ ನಮ್ಮ ರೋಗನಿರೋಧಕ ಶಕ್ತಿ ಶೇ. 70ರಷ್ಟು ಹೆಚ್ಚಬಹುದು. ಒಂದುವೇಳೆ ನಮ್ಮ ರೋಗನಿರೋಧಕ ಶಕ್ತಿಯು ಹೆಚ್ಚಾಗದಿದ್ದರೆ, ಲಸಿಕೆಯು ನಮ್ಮನ್ನು ಕಾಪಾಡಲಾಗದು’ ಎಂದು ಹೇಳಿದ್ದರು.

ಆದರೆ ಟ್ರಂಪ್, ‘ಯಾವುದೇ ರೀತಿಯಲ್ಲಿಯೂ, ಇದು (ಮಾಸ್ಕ್) ಲಸಿಕೆಗಿಂತ ಹೆಚ್ಚು ಪರಿಣಾಮಕಾರಿಯಲ್ಲ. ಈ ಬಗ್ಗೆ ಅವರನ್ನು (ರಾಬರ್ಟ್) ಕರೆದು ಮಾತನಾಡಿದ್ದೇನೆ. ನೀವು ಅವರನ್ನು ಕೇಳಿದ್ದರೆ ಸಂದರ್ಶನದಲ್ಲಿ ಕೇಳಿದ್ದಪ್ರಶ್ನೆಯನ್ನು ಸರಿಯಾಗಿ ಅರ್ಥಮಾಡಿಕೊಂಡಿರಲಿಲ್ಲ ಎನ್ನುತ್ತಿದ್ದರು. ಮಾಸ್ಕ್‌ಗಳಲ್ಲಿ ಸಮಸ್ಯೆಗಳೂ ಇವೆ. ಅವನ್ನು ಎಚ್ಚರಿಕೆಯಿಂದ ನಿರ್ವಹಿಸುವ ಅಗತ್ಯವಿದೆ’ ಎಂದು ಹೇಳಿದ್ದಾರೆ.

ಮುಂದುವರಿದು, ‘ಲಸಿಕೆಯು ಮಾಸ್ಕ್‌ಗಿಂತಲೂ ಹೆಚ್ಚು ಪರಿಣಾಮಕಾರಿ. ಮಾಸ್ಕ್ ಲಸಿಕೆಯಷ್ಟು ಮುಖ್ಯವಲ್ಲ. ಹೆಚ್ಚು ಜನರು ಮಾಸ್ಕ್ ಧರಿಸುವುದನ್ನು ಇಷ್ಟಪಡಲಾರರು’ ಎಂದಿದ್ದಾರೆ.

ಸಂದರ್ಶನ ವೇಳೆ ಕೇಳಲಾದ ಪ್ರಶ್ನೆಗೆ ತಾವು ತಪ್ಪಾಗಿ ಉತ್ತರಿಸಿದ್ದಾಗಿ ರಾಬರ್ಟ್ ತಿಳಿಸಿದ್ದಾರೆ. ಮಾತ್ರವಲ್ಲದೆ ‘ಲಸಿಕೆಯು ಮಾಸ್ಕ್‌ಗಿಂತ ಹೆಚ್ಚು ಪ್ರಯೋಜನಕಾರಿ’ ಎಂಬ ಭರವಸೆಯೂ ಅವರಿಗಿದೆ ಎಂದು ಟ್ರಂಪ್ ಹೇಳಿದ್ದಾರೆ.

ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಮಾಹಿತಿ ಪ್ರಕಾರಅಮೆರಿಕದಲ್ಲಿ 66.27 ಲಕ್ಷ ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ 25.25 ಲಕ್ಷ ಸೋಂಕಿತರು ಜನರು ಗುಣಮುಖರಾಗಿದ್ದು, 1.96ಲಕ್ಷ ಸೋಂಕಿತರು ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.