ಮೆಲ್ಬರ್ನ್: ನಿಮ್ಮ ಮುಖದ ಮೇಲೆ ಮಂದಹಾಸ ಮೂಡಿದರೆ ಮಾತ್ರ ನಿಮ್ಮ ಹೊಟ್ಟೆಗೆ ಊಟ ಸೇರುತ್ತದೆ. ನಗುವಿಗೂ ಆಹಾರಕ್ಕೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ? ಇದೆಲ್ಲಾ ಆಸ್ಟ್ರೇಲಿಯಾದ ಆರ್ಎಂಐಟಿ ವಿಶ್ವವಿದ್ಯಾಲಯದ ಎಕ್ಸರ್ಷನ್ ಗೇಮ್ಸ್ ಲ್ಯಾಬ್ನಲ್ಲಿ ತಯಾರಾದ ರೋಬೊಟಿಕ್ ಕೈ (ಫೀಡಿಂಗ್ ಆರ್ಮ್) ಚಳಕ.

ಇದನ್ನು ಬಳಸುವವರು ಎದೆಗೆ ಹತ್ತಿರ ಇಟ್ಟುಕೊಳ್ಳಬೇಕು. ಈ ರೋಬೊ ಕೈ ಯಾವ ಕೋನದಲ್ಲಾದರೂ ತುತ್ತು ತಿನಿಸುತ್ತದೆ. ಎದುರಿಗೆ ಕೂತ ಇಬ್ಬರು ವ್ಯಕ್ತಿಗಳ ನಡುವೆ ಇದನ್ನು ಇಡಬಹುದು. ಊಟ ಮಾಡಲು ಕೂರುವ ವ್ಯಕ್ತಿಗಳ ಭಾವನೆಗಳನ್ನು ಆಧರಿಸಿ ಇದು ಕೆಲಸ ಮಾಡುತ್ತದೆ.ಹೀಗಾಗಿ, ಈ ರೋಬೊ ಕೈನಲ್ಲಿ ಊಟ ಸವಿಯಬೇಕೆಂದರೆ ನಗುವುದು ಕಡ್ಡಾಯ.

ಇದನ್ನು ತಯಾರಿಸಿರುವ ಸಂಶೋಧಕರು ಇದರ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿದ್ದು, ಈಗ ವೈರಲ್ ಆಗಿದೆ. ‘ನೀವು ಎಷ್ಟು ನಗುತ್ತೀರೊ ಅಷ್ಟು ತುತ್ತು ತಿನಿಸುತ್ತದೆ ಈ ರೋಬೊ. ಇದರ ಕೈ ತುತ್ತು ತಿಂದರೆ, ಅದರ ಪ್ರೀತಿಗೆ ವಶರಾಗುವುದರಲ್ಲಿ ಸಂಶಯವಿಲ್ಲ’ ಎಂದು ಅವರು ಹೇಳಿದ್ದಾರೆ.

‘ಇದು ಮನುಷ್ಯನಿಗೆ ಮೂರನೇ ಕೈಯಂತೆ ಕೆಲಸ ಮಾಡಲಿದೆ, ಇದರ ಪ್ರಾಯೋಗಿಕ ಪರೀಕ್ಷೆಯೂ ಯಶಸ್ವಿಯಾಗಿದೆ. ಇದರ ಕೈ ತುತ್ತು ತಿಂದವರು, ಚಿಕ್ಕಂದಿನಲ್ಲಿ ತಾಯಿ ಪ್ರೀತಿಯಿಂದ ತಿನ್ನಿಸಿದ ಕೈ ತುತ್ತನ್ನು ನೆನಪಿಸಿದೆ’ ಎಂದು ಅಭಿಪ್ರಾಯಪಟ್ಟಿರುವುದಾಗಿ ಹೇಳಿದ್ದಾರೆ.

ಈ ರೋಬೊ ಕೈ ತಯಾರಿ ಹಿಂದೆ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಸಂಶೋಧಕರ ಶ್ರಮವೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.