ಲಂಡನ್: ಮಾಡರ್ನಾ ಕೋವಿಡ್–19 ಲಸಿಕೆ ಬಳಕೆಗೆ ಬ್ರಿಟನ್ನ ಔಷಧ ನಿಯಂತ್ರಣ ಪ್ರಾಧಿಕಾರ ಅನುಮತಿ ನೀಡಿರುವುದಾಗಿ ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ. ಹೆಚ್ಚುವರಿಯಾಗಿ ಒಂದು ಕೋಟಿ ಡೋಸ್ ಲಸಿಕೆ ಖರೀದಿಸಲು ಒಪ್ಪಂದ ಮಾಡಿಕೊಂಡಿರುವುದಾಗಿಯೂ ಸಚಿವಾಲಯ ತಿಳಿಸಿದೆ.

ಇದರೊಂದಿಗೆ, ಬ್ರಿಟನ್ನಲ್ಲಿ ಒಟ್ಟು ಮೂರು ಲಸಿಕೆಗಳ ಬಳಕೆಗೆ ಅನುಮತಿ ನೀಡಿದಂತಾಗಿದೆ. ಫೈಜರ್–ಬಯೋಎನ್ಟೆಕ್ ಮತ್ತು ಆಸ್ಟ್ರಾಜೆನೆಕಾ ಲಸಿಕೆಗಳ ಬಳಕೆಗೆ ಈಗಾಗಲೇ ಅನುಮತಿ ನೀಡಲಾಗಿದೆ.

ಇದನ್ನೂ ಓದಿ:ಮಾಡರ್ನಾ ಕೋವಿಡ್–19 ಲಸಿಕೆ ಶೇ 94.5ರಷ್ಟು ಪರಿಣಾಮಕಾರಿ

ಬ್ರಿಟನ್ ಈಗಾಗಲೇ ಮಾಡರ್ನಾ ಲಸಿಕೆಯ 1.7 ಕೋಟಿ ಡೋಸ್ ಖರೀದಿಗೆ ಬ್ರಿಟನ್ ಒಪ್ಪಂದ ಮಾಡಿಕೊಂಡಿದೆ. ಮಾಡರ್ನಾ ಕಂಪನಿಯು ಉತ್ಪಾದನಾ ಸಾಮರ್ಥ್ಯ ವಿಸ್ತರಿಸಿದ ಕೂಡಲೇ ಬ್ರಿಟನ್ಗೆ ಲಸಿಕೆ ಪೂರೈಕೆ ಆರಂಭಿಸಲಿದೆ.

‘ನಾವು ಈಗಾಗಲೇ ಬ್ರಿಟನ್ನಾದ್ಯಂತ 1.5 ಕೋಟಿ ಜನರಿಗೆ ಲಸಿಕೆ ನೀಡಿದ್ದೇವೆ. ಮಾಡರ್ನಾ ಲಸಿಕೆ ಲಭ್ಯವಾಗುತ್ತಿದ್ದಂತೆಯೇ ಲಸಿಕೆ ನೀಡಿಕೆ ಯೋಜನೆ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ’ ಎಂದು ಆರೋಗ್ಯ ಸಚಿವ ಮ್ಯಾಟ್ ಹ್ಯಾನ್ಕಾಕ್ ತಿಳಿಸಿದ್ದಾರೆ.

ಮಸಾಚುಸೆಟ್ಸ್ ಮೂಲದ ಮಾಡರ್ನಾ ಬಯೋಟೆಕ್ ಕಂಪನಿಯು ಅಭಿವೃದ್ಧಿ ಪಡಿಸಿರುವ ಕೋವಿಡ್–19 ಲಸಿಕೆಯು ಶೇ 94.5ರಷ್ಟು ಪರಿಣಾಮಕಾರಿ ಎಂಬುದು ಮೂರನೇ ಹಂತದ ಪ್ರಯೋಗಗಳ ಅಧ್ಯಯಗಳಲ್ಲಿ ಕಂಡುಬಂದಿತ್ತು.

ಅಮೆರಿಕ, ಕೆನಡಾ ಹಾಗೂ ಯುರೋಪ್ ಒಕ್ಕೂಟ ರಾಷ್ಟ್ರಗಳಲ್ಲಿ ಈಗಾಗಲೇ ಮಾಡರ್ನಾ ಲಸಿಕೆ ಬಳಕೆಗೆ ಅನುಮತಿ ದೊರೆತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.