ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಕೊ ಮೇಲೆ ಡ್ರೋನ್ ದಾಳಿ: ವಿಮಾನ ಸೇವೆ ಸ್ಥಗಿತ

Published 26 ಆಗಸ್ಟ್ 2023, 14:34 IST
Last Updated 26 ಆಗಸ್ಟ್ 2023, 14:34 IST
ಅಕ್ಷರ ಗಾತ್ರ

ಕೀವ್‌: ರಷ್ಯಾ ರಾಜಧಾನಿ ಮಾಸ್ಕೊ ಮೇಲೆ ಶನಿವಾರ ಮುಂಜಾನೆ ಡ್ರೋನ್ ದಾಳಿ ನಡೆದ ಪರಿಣಾಮ ಪ್ರಮುಖ ಮೂರು ವಿಮಾನ ನಿಲ್ದಾಣಗಳ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ರಷ್ಯಾ ರಾಜಧಾನಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಉಕ್ರೇನ್‌ ನಡೆಸುತ್ತಿರುವ ದಾಳಿಯೇ ಇದಕ್ಕೆ ಕಾರಣ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

‘ಮಾಸ್ಕೊ ನಗರದ 50 ಕಿಲೋಮೀಟರ್‌ ಪ್ರದೇಶದಲ್ಲಿ ಡ್ರೋನ್‌ ದಾಳಿ ನಡೆದಿದೆ’ ಎಂದು ಮೇಯರ್‌ ಸರ್ಗೆ ಸೊಬ್ಯಾನಿನ್‌ ತಿಳಿಸಿದ್ದಾರೆ. ಪ್ರಾಣಹಾನಿ ಅಥವಾ ಇತರ ಹಾನಿಯ ಬಗ್ಗೆ ತಕ್ಷಣಕ್ಕೆ ಯಾವುದೇ ವರದಿಯಾಗಿಲ್ಲ.

ಶೆರೆಮೆಟೆವೊ, ಡೊಮೊದೆದೊವೊ ಮತ್ತು ವಿನುಕೊವೊ ವಿಮಾನ ನಿಲ್ದಾಣಗಳ ಸೇವೆಯನ್ನು ಶನಿವಾರ ಒಂದು ಗಂಟೆ ಕಾಲ ಸ್ಥಗಿತಗೊಳಿಸಲಾಗಿತ್ತು ಎಂದು ರಷ್ಯಾ ಮಾಧ್ಯಮ ಟಾಸ್‌ ಏಜೆನ್ಸಿ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT