ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಟ್‌ಹೌಸ್‌ನಲ್ಲಿ ಅದ್ದೂರಿ ಔತಣಕೂಟ: ಅತಿಥಿಗಳಾಗಿ ಮುಖೇಶ್ ಅಂಬಾನಿ, ಆನಂದ್ ಮಹೀಂದ್ರಾ

Published 23 ಜೂನ್ 2023, 3:19 IST
Last Updated 23 ಜೂನ್ 2023, 3:19 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ದಂಪತಿ ಶ್ವೇತಭವನದ ದಕ್ಷಿಣ ಭಾಗದಲ್ಲಿರುವ ಉದ್ಯಾನದಲ್ಲಿ ಮೋದಿ ಅವರಿಗಾಗಿ ಏರ್ಪಡಿಸಿದ್ದ ಔತಣಕೂಟದಲ್ಲಿ 400 ಜನ ಗಣ್ಯ ಅತಿಥಿಗಳು ಪಾಲ್ಗೊಂಡಿದ್ದಾರೆ.

ಸಿರಿಧಾನ್ಯಗಳಿಂದ ತಯಾರಿಸಿದ್ದ ಸ್ವಾದಿಷ್ಟಮಯ ತಿನಿಸುಗಳು, ಕೋಸಂಬರಿ, ಮಸಾಲೆಯುಕ್ತ ಅಣಬೆ ಸೇರಿದಂತೆ ತರಹೇವಾರಿ ಭಕ್ಷ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಸವಿದಿದ್ದಾರೆ.

ಗೂಗಲ್ ಸಿಇಒ ಸುಂದರ್ ಪಿಚೈ, ಮೈಕ್ರೊಸಾಫ್ಟ್‌ ಸಿಇಒ ಸತ್ಯ ನಾದೆಲ್ಲ, ಪೆಪ್ಸಿಕೊ ಕಂಪನಿಯ ಮಾಜಿ ಸಿಇಒ ಇಂದ್ರಾ ನೂಯಿ, ಆ್ಯಪಲ್ ಕಂಪನಿಯ ಸಿಇಒ ಟಿಮ್ ಕುಕ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದಾರೆ.

ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್, ರಾಷ್ಟ್ರೀಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್‌, ವಿದೇಶಾಂಗ ಕಾರ್ಯದರ್ಶಿ ವಿನಯ್‌ ಮೋಹನ್ ಕ್ವಾತ್ರಾ, ಭಾರತ ಸರ್ಕಾರದ ಪ್ರತಿನಿಧಿಗಳು ಔತಣಕೂಟದಲ್ಲಿ ಭಾಗಿಯಾಗಿದ್ದಾರೆ.

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ಯುಎಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮತ್ತು ಭಾರತದಲ್ಲಿರುವ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಸೇರಿದಂತೆ ಭಾರತೀಯ ಮೂಲದ ಯುಎಸ್ ಪ್ರತಿನಿಧಿಗಳಾದ ರೋ ಖನ್ನಾ ಮತ್ತು ರಾಜಾ ಕೃಷ್ಣಮೂರ್ತಿ, ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಮತ್ತು ಪ್ರಸಿದ್ಧ ಫ್ಯಾಷನ್ ಡಿಸೈನರ್ ರಾಲ್ಫ್ ಲಾರೆನ್ ಇದ್ದರು.

ಕಲ್ಲಂಗಡಿ ಹಣ್ಣುಗಳು, ಆವಕಾಡೊ ಸಾಸ್, ಇಟಲಿಯ ಜನಪ್ರಿಯ ಖಾದ್ಯ ರಿಸೊಟ್ಟೊವನ್ನು ಕೂಡ ಸಿದ್ಧಪಡಿಸಲಾಗಿತ್ತು. ಸೀಫುಡ್‌ ಪ್ರಿಯರಿಗಾಗಿ ವಿವಿಧ ಬಗೆಯ ಮೀನುಗಳಿಂದ ತಯಾರಿಸಿದ್ದ ಖಾದ್ಯಗಳೂ ಇವೆ.

‘ಪ್ರಧಾನಿ ನರೇಂದ್ರ ಮೋದಿ ಅವರು ಸಸ್ಯಾಹಾರಿ. ಬಾಣಸಿಗರಾದ ನಿನಾ ಕರ್ಟಿಸ್ ಸಸ್ಯಹಾರಿ ಅಡುಗೆ ತಯಾರಿಸುವಲ್ಲಿ ನಿಷ್ಣಾತೆ. ಹೀಗಾಗಿ ಮೋದಿ ಅವರಿಗಾಗಿ ರುಚಿಕರವಾದ ಸಸ್ಯಹಾರಿ ಅಡುಗೆ ಸಿದ್ಧಪಡಿಸಲು ಶ್ವೇತಭವನದ ಸಿಬ್ಬಂದಿಗೆ ನೆರವಾಗುವಂತೆ ಕರ್ಟಿಸ್‌ ಅವರಿಗೆ ಹೇಳಿದ್ದೆ’ ಎಂದು ಜಿಲ್‌ ಬೈಡನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT