ಕಠ್ಮಂಡು: ಎವರೆಸ್ಟ್ ಮ್ಯಾನ್ ಎಂದೇ ಹೆಸರಾಗಿರುವ ನೇಪಾಳದ ಕಮಿ ರೀಟಾ ಶೆರ್ಪಾ 29ನೇ ಬಾರಿ ವಿಶ್ವದ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಏರುವ ಮೂಲಕ ಹಿಂದಿನ ತಮ್ಮದೇ ದಾಖಲೆಯನ್ನು ಸರಿಗಟ್ಟಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ರೀಟಾ ಅವರು ಭಾನುವಾರ ಬೆಳಿಗ್ಗೆ ಪರ್ವತದ ತುತ್ತತುದಿ 8,848.86 ಮೀಟರ್ ಎತ್ತರಕ್ಕೆ ತಲುಪಿದರು ಎಂದು ನೇಪಾಳ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.

ಪರ್ವತವನ್ನು ಏರುವ ಮೊದಲು 'ಯಾವುದೇ ನಿರ್ದಿಷ್ಟ ಸಂಖ್ಯೆಯ ಬಾರಿ ಸಾಗರ್ಮಠವನ್ನು (ಮೌಂಟ್ ಎವರೆಸ್ಟ್ಗೆ ನೇಪಾಳದ ಹೆಸರು) ಏರುವ ಯೋಚನೆಯನ್ನು ಹೊಂದಿರಲಿಲ್ಲ ಎಂದು ರೀಟಾ ಹೇಳಿದ್ದಾರೆ.

ರೀಟಾ ಅವರು 1994 ಮೇ 13ರಂದು ಮೊದಲ ಬಾರಿಗೆ ಎವರೆಸ್ಟ್ ಏರಿದ್ದರು. 2022ರಲ್ಲಿ 26ನೇ ಬಾರಿಗೆ ಪರ್ವತವನ್ನು ಏರುವ ಮೂಲಕ ಅತಿ ಹೆಚ್ಚು ಬಾರಿ ಎವರೆಸ್ಟ್ ಏರಿದ ಮೊದಲಿಗರು ಎಂಬ ದಾಖಲೆ ನಿರ್ಮಿಸಿದ್ದರು.
.ಮೌಂಟ್ ಎವರೆಸ್ಟ್ ಏರಿದ 10 ನೇಪಾಳಿ ಪರ್ವತಾರೋಹಿಗಳು.28ನೇ ಬಾರಿಗೆ ಮೌಂಟ್ ಎವರೆಸ್ಟ್ ಏರಿದ ಕಾಮಿ ರೀಟಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.