ನವದೆಹಲಿ: ನ್ಯೂಯಾರ್ಕ್ ನಗರದ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚಾರಿತ್ರಿಕ ಗೆಲುವು ಗಳಿಸಿದ ಭಾರತ ಸಂಜಾತ ಅಭ್ಯರ್ಥಿ ಜೊಹ್ರಾನ್ ಮಮ್ದಾನಿ ಅವರ ವಿಜಯೋತ್ಸವ ವೇಳೆ ಬಾಲಿವುಡ್ನ ‘ಧೂಮ್ ಮಚಾಲೆ’ ಹಾಡು ಸದ್ದು ಮಾಡಿದೆ.

ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಜೊಹ್ರಾನ್ ಮಮ್ದಾನಿ ಭಾರತದ ಸಿನಿಮಾ ನಿರ್ದೇಶಕಿ ಮೀರಾ ನಾಯರ್, ಕೊಲಂಬಿಯಾ ವಿವಿ ಪ್ರಾಧ್ಯಾಪಕ ಮಹಮದ್ ಮಮ್ದಾನಿ ಅವರ ಪುತ್ರ.

ಮಮ್ದಾನಿ ಗೆಲುವಿನ ಸಂಭ್ರಮಾಚರಣೆಯಲ್ಲಿ ಧೂಮ್ ಮಚಾಲೆ ಹಾಡು ಸದ್ದು ಮಾಡಿದ್ದಕ್ಕೆ, ಹಾಡಿದ ಸಂಗೀತ ಸಂಯೋಜಕ ಪ್ರೀತಮ್ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.

‘ಮಮ್ದಾನಿ ಅವರು ಮೀರಾ ನಾಯರ್ ಅವರ ಮಗ ಆಗಿರುವುದರಿಂದ ಮೇಯರ್ ಚುನಾವಣೆಯ ಫಲಿತಾಂಶ ತಿಳಿದುಕೊಳ್ಳಲು ನನಗೆ ತುಂಬಾ ಆಸಕ್ತಿ ಇತ್ತು. ಅವರು ಗೆಲ್ಲುತ್ತಾರೆ ಎಂದು ಆಶಿಸುತ್ತಿದ್ದೆ. ಅಮೆರಿಕದಲ್ಲಿರುವ ಸ್ನೇಹಿತರೊಬ್ಬರು ಮಮ್ದಾನಿ ಗೆಲುವಿನ ಸುದ್ದಿಯನ್ನು ಹಾಗೂ ಜಯದ ಸಂಭ್ರಮದ ವೇಳೆ ‘ಧೂಮ್ ಮಚಾಲೆ' ಹಾಡು ಇರುವ ವಿಡಿಯೊ ತುಣುಕನ್ನು ಕಳುಹಿಸಿದ್ದರು. ಆ ಸಂದರ್ಭಕ್ಕೆ ಆ ಹಾಡು ಸರಿಯಾಗಿ ಹೊಂದಿದೆ ಎನ್ನಿಸಿತು. ‘ಧೂಮ್ ಮಚಾಲೆ’ ಹಾಡು ಬಿಡುಗಡೆಯಾದಾಗ ಆಗ್ನೇಯ ಭಾಗದ ರಾಷ್ಟ್ರಗಳಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಬಾಲಿವುಡ್ ಹಾಡುಗಳು ನಮ್ಮ ದೇಶಕ್ಕೆ ಯಾವಾಗಲೂ ಶಕ್ತಿಯಾಗಿದೆ’ ಎಂದು ಪ್ರೀತಮ್ ಪಿಟಿಐಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.