ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನ ಅತಿ ದೊಡ್ಡ ನಗರ ಆಕ್ಲೆಂಡ್‌ನಲ್ಲಿ ಮಂಗಳವಾರದಿಂದ ಕೋವಿಡ್ ನಿಯಂತ್ರಣದ ಕೆಲವು ನಿಯಮಗಳನ್ನು ಸಡಿಸಲಾಗುವುದು. ಆದರೆ ಲಾಕ್‌ಡೌನ್ ಕನಿಷ್ಠ ಇನ್ನೂ ಎರಡು ವಾರಗಳವರೆಗೆ ಮುಂದುವರೆಯಲಿದೆ.

ಆಕ್ಲೆಂಡ್‌ನಲ್ಲಿಒಂದು ತಿಂಗಳಿನಿಂದ ಕಠಿಣ ನಿಯಮಾವಳಿಗಳ ಲಾಕ್‌ಡೌನ್ ಜಾರಿಯಲ್ಲಿದೆ. ಸಾಂಕ್ರಾಮಿಕ ಆರಂಭವಾದಾಗಿನಿಂದ ಇದು ದೀರ್ಘ ಅವಧಿವರೆಗಿನ ಲಾಕ್‌ಡೌನ್ ಆಗಿದೆ.

ಮಂಗಳವಾರದಿಂದ ರೆಸ್ಟೋರೆಂಟ್‌ನಲ್ಲಿ ಪಾರ್ಸೆಲ್ ವ್ಯವಸ್ಥೆ ಇರುತ್ತದೆ. ಕೆಲವೆಡೆ ಕೆಲಸದ ಸ್ಥಳಗಳು ಪುನರಾರಂಭಗೊಳ್ಳಲಿವೆ. ಆದರೆ ಬಹುತೇಕ ಮಂದಿ ಮನೆಯಿಂದಲೇ ಕೆಲಸ ಮಾಡಬೇಕಿದೆ. ಶಾಲೆಗಳು ಮುಚ್ಚಿರುತ್ತವೆ.

ನಗರದಲ್ಲಿ ಪ್ರತಿ ದಿನ ಡೆಲ್ಟಾ ತಳಿಯ 20 ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಆಕ್ಲೆಂಡ್‌ನ ಸಮೀಪದ ಪಟ್ಟಣಕ್ಕೂ ಸೋಂಕು ಹರಡಿದೆ. ಸೋಂಕುಪೀಡಿತ ಕೈದಿಯೊಬ್ಬ ಜಾಮೀನು ಪಡೆದು ಮನೆಗೆ ತೆರಳಿದ್ದು ಇದಕ್ಕೆ ಕಾರಣ.

ಪ್ರಧಾನಿ ಜಸಿಂಡಾ ಆರ್ಡನ್ ಅವರು, ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್ ಪರಿಣಾಮಕಾರಿ ಎಂಬ ವಿಶ್ವಾಸವನ್ನುವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.