ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದ ಮೇರೆಗೆ ಸರ್ಕಾರಿ ನೌಕರರನ್ನು ಕಡಿತಗೊಳಿಸುವಲ್ಲಿ ಎಲಾನ್ ಮಸ್ಕ್ ಅವರ ಪಾತ್ರವನ್ನು ವಿರೋಧಿಸಿ ಶನಿವಾರ ನ್ಯೂಯಾರ್ಕ್ ನಗರದ ಟೆಸ್ಲಾ ಡೀಲರ್ಶಿಪ್ ಬಳಿ ಪ್ರತಿಭಟನೆ ನಡೆಸಿದ 9 ಮಂದಿಯನ್ನು ಬಂಧಿಸಲಾಗಿದೆ.
.ಮಾಡಿರುವ ಕೆಲಸದ ಬಗ್ಗೆ ಸರ್ಕಾರಿ ನೌಕರರು ವಿವರಣೆ ನೀಡಬೇಕು: ಮಸ್ಕ್ ಎಚ್ಚರಿಕೆ.
ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆಯ (ಡಿಒಜಿಇ) ಉಸ್ತುವಾರಿಯೂ ಆಗಿರುವ ಎಲಾನ್ ಮಸ್ಕ್ ವಿರುದ್ಧದ ಈ ಪ್ರತಿಭಟನೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.

ಫ್ಲೋರಿಡಾದ ಜಾಕ್ಸನ್ವಿಲ್ಲೆ, ಟಕ್ಸನ್, ಅರಿಜೋನಾ ಮತ್ತು ಇತರ ನಗರಗಳಲ್ಲಿ ಟೆಸ್ಲಾ ಷೋ ರೂಂಗಗಳಿಗೆ ನುಗ್ಗಿದ ಪ್ರತಿಭನಾಕಾರರು, ಮಸ್ಕ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ‘ಟೆಸ್ಲಾ ಹೊತ್ತಿಸಿ, ಪ್ರಜಾಪ್ರಭುತ್ವ ಉಳಿಸಿ, ‘ಅಮೆರಿಕದಲ್ಲಿ ಸರ್ವಾಧಿಕಾರಿಗಳು ಬೇಡ’ ಎನ್ನುವ ಬರಹಗಳು ಇರುವ ಫಲಕಗಳನ್ನು ಪ್ರದರ್ಶಿಸಿ, ಘೋಷಣೆಗಳನ್ನು ಕೂಗಿದರು.
.ಮಸ್ಕ್ DOGE ಉದ್ಯೋಗಿಯಲ್ಲ, ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿಲ್ಲ: ಶ್ವೇತಭವನ.
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಮಸ್ಕ್ ಅವರು, ಅಮೆರಿಕದ ಸಾವಿರಾರು ಸರ್ಕಾರಿ ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ.

ಟ್ರಂ ಪ್ಅವರು ಜನವರಿ 20 ರಂದು ಅಧಿಕಾರ ವಹಿಸಿಕೊಂಡಾಗಿನಿಂದ, 23 ಲಕ್ಷ ಸರ್ಕಾರಿ ಉದ್ಯೋಗಿಗಳ ಪೈಕಿ ಕನಿಷ್ಠ 1 ಲಕ್ಷ ನೌಕರರು ರಾಜೀನಾಮೆ ನೀಡಿದ್ದಾರೆ ಅಥವಾ ವಜಾಗೊಂಡಿದ್ದಾರೆ.
.ಅಮೆರಿಕದಲ್ಲಿ ಇಲಾನ್ ಮಸ್ಕ್ ಭೇಟಿ ಮಾಡಿ ಮಾತುಕತೆ ನಡೆಸಿದ ಪ್ರಧಾನಿ ಮೋದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.