ಕೇಪ್ ಕ್ಯಾನವೆರಲ್:ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ನಾಳೆ ಭೂಮಿಗೆ ಮರಳುತ್ತಿರುವ ಗಗನಯಾತ್ರಿಗಳು ಡೈಪರ್ಗಳನ್ನು ಧರಿಸಿ ಬರಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ಗಗನಯಾತ್ರಿಗಳು ಭೂಮಿಗೆ ಬರಲು ಬಳಸುವ ಕ್ಯಾಪ್ಸೂಲ್ನಲ್ಲಿನ ಶೌಚಾಲಯಕ್ಕೆ ಹಾನಿಯಾಗಿದೆ. ಅದು ಬಳಕೆಗೆ ಯೋಗ್ಯವಾಗಿಲ್ಲ. ಹೀಗಾಗಿ ಅವರು ಡೈಪರ್ಗಳನ್ನು ಬಳಸಬೇಕಾಗಿ ಬಂದಿದೆ.

ತಮ್ಮ ಪರಿಸ್ಥಿತಿಯು ಸಮಸ್ಯಾತ್ಮಕವಾಗಿದೆ ಎಂದು ನಾಸಾ ಗಗನಯಾತ್ರಿ ಮೇಗನ್ ಮ್ಯಾಕ್ಆರ್ಥರ್ ಶುಕ್ರವಾರ ಹೇಳಿದ್ದಾರೆ. ಆದರೆ, ಪರಿಸ್ಥಿತಿಯನ್ನು ನಿಭಾಯಿಸುವುದಾಗಿಯೂ ಅವರು ವಿವರಿಸಿದ್ದಾರೆ. ಮ್ಯಾಕ್ ಆರ್ಥರ್ ಸೇರಿದಂತೆ ನಾಲ್ವರು ಗಗನ ಯಾತ್ರಿಗಳು ಭಾನುವಾರ ಬಾಹ್ಯಾಕಾಶ ನಿಲ್ದಾಣದಿಂದ ಕ್ಯಾಪ್ಸೂಲ್ ಮೂಲಕ ಹೊರಟು ಸೋಮವಾರ ಬೆಳಿಗ್ಗೆ ಭೂಸ್ಪರ್ಶ ಮಾಡಲಿದ್ದಾರೆ. ಈ ಪ್ರಯಾಣ 20 ಗಂಟೆಗಳ ಸಮಯ ಹಿಡಿಯುತ್ತದೆ.

‘ಬಾಹ್ಯಾಕಾಶಯಾನವು ಸಣ್ಣ ಪುಟ್ಟ ಸವಾಲುಗಳಿಂದ ಕೂಡಿರುತ್ತದೆ‘ ಎಂದು ಮೇಗನ್ ಮ್ಯಾಕ್ಆರ್ಥರ್ ಕಕ್ಷೆಯಿಂದಲೇ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ‘ಇದು ನಮ್ಮ ಕಾರ್ಯಾಚರಣೆಯಲ್ಲಿ ನಾವು ಎದುರಿಸಬಹುದಾದ ಸಣ್ಣ ಸಮಸ್ಯ. ಇದನ್ನು ನಾವು ನಿಭಾಯಿಸಬಲ್ಲೆವು. ಆದ್ದರಿಂದ ನಾವು ಅದರ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ,‘ ಎಂದು ಮ್ಯಾಕ್ಆರ್ಥರ್ ವಿಶ್ವಾಸದಿಂದ ಹೇಳಿದರು.

ಮ್ಯಾಕ್ಆರ್ಥರ್ ಮತ್ತು ತಂಡವನ್ನು ಹಿಂದೆ ಕರೆಸಿಕೊಳ್ಳಲು ನಿರ್ವಾಹಕರು ನಿರ್ಧರಿಸಿದ್ದಾರೆ. ಇದಕ್ಕೂ ಮೊದಲು ಶುಕ್ರವಾರ ಸರಣಿ ಸಭೆಗಳು ನಡೆದವು. ಬದಲಿ ತಂಡವನ್ನು ಕಳುಹಿಸುವ ಮೊದಲೇ ಮ್ಯಾಕ್ಆರ್ಥರ್ ತಂಡವನ್ನು ಭೂಮಿಗೆ ಕರೆಸಿಕೊಳ್ಳಲಾಗುತ್ತಿದೆ. ಪ್ರತಿಕೂಲ ಹವಾಮಾನ, ಗಗನಾಯತ್ರಿಗಳ ತಂಡದ ಸದಸ್ಯರೊಬ್ಬರಿಗೆ ಆರೋಗ್ಯ ಸಮಸ್ಯೆ ಎದುರಾಗಿರುವ ಕಾರಣ ಬಾಹ್ಯಾಕಾಶ ನಿಲ್ದಾಣಕ್ಕೆ ಬದಲಿ ತಂಡವನ್ನು ಕಳುಹಿಸುವ ‘ಸ್ಪೇಸ್ ಎಕ್ಸ್’ ಉಡಾವಣೆ ವಿಳಂಬವಾಗಿದೆ.

ಬಾಹ್ಯಾಕಾಶಕ್ಕೆ ಗಗನಾಯತ್ರಿಗಳ ತಂಡವನ್ನು ರವಾನಿಸುವ ಸ್ಪೇಸ್ಎಕ್ಸ್ ಕಾರ್ಯಾಚರಣೆಯು ಬಹುತೇಕ ಬುಧವಾರ ನೆರವೇರುವ ಸಾಧ್ಯತೆಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.