ಒಸ್ಲೊ: ವೆನೆಜುವೆಲಾದ ವಿರೋಧಪಕ್ಷದ ನಾಯಕಿ ಮತ್ತು ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾದೊ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ಒಲಿದಿದೆ.

‘ವೆನೆಜುವೆಲಾದ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಪ್ರಚುರಪಡಿಸಲು ಮತ್ತು ಸರ್ವಾಧಿಕಾರದಿಂದ ಪ್ರಜಾಪ್ರಭುತ್ವದೆಡೆಗೆ ಶಾಂತಿಯುತವಾಗಿ ದೇಶವನ್ನು ಕೊಂಡೊಯ್ಯಲು ನಡೆಸಿದ ಹೋರಾಟಗಳಿಗಾಗಿ ಮಾರಿಯಾ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ನೀಡಲಾಗುತ್ತಿದೆ’ ಎಂದು ನಾರ್ವೆಯ ನೊಬೆಲ್ ಸಮಿತಿಯ ಅಧ್ಯಕ್ಷ ಜಾರ್ಗೆನ್ ವಾಟ್ನೆ ಫ್ರಿಡ್ನೆಸ್ ಅವರು ಹೇಳಿದ್ದಾರೆ.

‘ನಿರಂಕುಶ ಆಡಳಿತದಿಂದಾಗಿ ಮಾನವೀಯತೆಯ ಅಧಃಪತನ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದಿರುಸುತ್ತಿರುವ ವೆನೆಜುವೆಲಾದಲ್ಲಿ ಸಮರ್ಥ ವಿರೋಧ ಪಕ್ಷವಾಗಿ ಮಾರಿಯಾ ಕಾರ್ಯನಿರ್ವಹಿಸಿದ್ದಾರೆ. ಜೀವ ಬೆದರಿಕೆಗಳು ಇದ್ದರೂ ದೇಶಕ್ಕಾಗಿ ದೃಢವಾಗಿ ನಿಂತಿದ್ದಾರೆ. ದೌರ್ಜನ್ಯದ ವಿರುದ್ಧ ನಾಗರಿಕರು ತೋರುವ ಧೈರ್ಯಕ್ಕೆ ಅವರು ಅದ್ಭುತ ಉದಾಹರಣೆಯಾಗಿದ್ದಾರೆ’ ಎಂದು ಫ್ರಿಡ್ನೆಸ್ ಹೇಳಿದ್ದಾರೆ.

ಪ್ರಶಸ್ತಿಯು ಚಿನ್ನದ ಪದಕ, ಪ್ರಶಸ್ತಿಪತ್ರ ಹಾಗೂ 1.2 ಮಿಲಿಯನ್ ಡಾಲರ್ (ಅಂದಾಜು ₹10 ಕೋಟಿ) ಒಳಗೊಂಡಿದ್ದು, ಒಸ್ಲೊದಲ್ಲಿ ಡಿಸೆಂಬರ್ 10ರಂದು ಪ್ರದಾನ ಮಾಡಲಾಗುತ್ತದೆ.

ತಮಗೆ ನೊಬೆಲ್ ಪ್ರಶಸ್ತಿ ಲಭಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ಅವರು, ‘ನಾನು ಇದಕ್ಕೆ ಅರ್ಹಳಲ್ಲ. ನಮ್ಮ ದೇಶದ ಜನರಿಗೆ ಸಂದ ಗೌರವವಿದು’ ಎಂದಿದ್ದಾರೆ.

ಕಳೆದ ಒಂದು ವರ್ಷದಿಂದ ಮಾರಿಯಾ ಅವರು ಅಜ್ಞಾತವಾಸದಲ್ಲಿದ್ದರು. ‘ಪ್ರಜಾಪ್ರಭುತ್ವ ಮತ್ತು ಪ್ರಜಾಪ್ರಭುತ್ವಕ್ಕಾಗಿ ಒಬ್ಬ ಮಹಿಳೆ ಹಾಗೂ ದೇಶದ ಜನರು ನಡೆಸುತ್ತಿರುವ ನಿರಂತರ ಹೋರಾಟ ಗುರುತಿಸಿ ನೀಡಿರುವ ಪ್ರಶಸ್ತಿ ಇದು’ ಎಂದು ವಿರೋಧ ಪಕ್ಷದ ನಾಯಕ ಎಡ್ಮಂಡೊ ಗೊನ್ಜಾಲೇಜ್ ಉರುಟಿಯಾ ಹೇಳಿದ್ದಾರೆ.

ಕಳೆದ ವರ್ಷ ಮಾರಿಯಾ ಅವರು ಐರೋಪ್ಯ ಒಕ್ಕೂಟದ ಮಾನವ ಹಕ್ಕುಗಳ ಸಂಘಟನೆ ನೀಡುವ ‘ಸಖರೋವ್ ಪ್ರಶಸ್ತಿ’ಗೆ ಮಾರಿಯಾ ಭಾಜನರಾಗಿದ್ದಾರೆ. ಕೌನ್ಸಿಲ್ ಆಫ್ ಯುರೋಪ್ ನೀಡುವ ‘ವಕ್ಲಾವ್ ಹ್ಯಾವೆಲ್’ ಪ್ರಶಸ್ತಿಯೂ ಅವರಿಗೆ ಸಂದಿದೆ.

ಶಾಂತಿಯುತ ಹೋರಾಟದ ಮೂಲಕ ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವ ಸ್ಥಾಪಿಸುವ ನಮ್ಮ ಹೋರಾಟ ನಿಲ್ಲುವುದಿಲ್ಲ. ಈ ಹೋರಾಟದಲ್ಲಿ ನಮಗೆ ಗೆಲುವು ಸಿಗುವುದು ಖಚಿತ
ಮಾರಿಯಾ ಕೊರಿನಾ ಮಚಾದೊ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ

ಮಾರಿಯಾ ಯಾರು?

1967 ಅಕ್ಟೋಬರ್ 7ರಂದು ವೆನೆಜುವೆಲಾದ ಕರಾಕಸ್ನಲ್ಲಿ ಜನಿಸಿದ ಮಾರಿಯಾ ಅವರು ರಾಜಕೀಯಕ್ಕೆ ಧುಮುಕುವ ಮೊದಲು ಕೈಗಾರಿಕಾ ಎಂಜಿನಿಯರ್ ಆಗಿದ್ದರು. 2023ರಲ್ಲಿ ಪಕ್ಷದ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಪ್ರಾಥಮಿಕ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದರು. ವೆನೆಜುವೆಲಾ ಅಧ್ಯಕ್ಷ ಸ್ಥಾನಕ್ಕೆ 2024ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದರು. ಆದರೆ ಕಾರಣಾಂತರಗಳಿಂದಾಗಿ ಅವರು ಕಣದಿಂದ ಹಿಂದೆ ಸರಿಯಬೇಕಾಯಿತು. ಸರ್ವಾಧಿಕಾರಿ ಧೋರಣೆ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿರುವ ಮಾರಿಯಾ ಅವರು ಹಲವು ಬಾರಿ ತಲೆಮರೆಸಿಕೊಳ್ಳಬೇಕಾದ ಪರಿಸ್ಥಿತಿಯು ನಿರ್ಮಾಣವಾಗಿತ್ತು. ದೇಶದ ಹಾಲಿ ಅಧ್ಯಕ್ಷ ನಿಕೋಲಸ್ ಮಡುರೊ ವಿರುದ್ಧ ಪ್ರತಿಭಟನೆ ನಡೆಸಿದ ಕಾರಣಕ್ಕಾಗಿ ಕೆಲ ಕಾಲ ಅವರು ಸೆರೆವಾಸ ಅನುಭವಿಸಬೇಕಾಯಿತು. ಕಳೆದ ವರ್ಷ ಮಾರಿಯಾ ಅವರು ಐರೋಪ್ಯ ಒಕ್ಕೂಟದ ಮಾನವ ಹಕ್ಕುಗಳ ಸಂಘಟನೆ ನೀಡುವ ‘ಸಖರೋವ್ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಕೌನ್ಸಿಲ್ ಆಫ್ ಯುರೋಪ್ ನೀಡುವ ‘ವಕ್ಲಾವ್ ಹ್ಯಾವೆಲ್’ ಪ್ರಶಸ್ತಿಯೂ ಅವರಿಗೆ ಸಂದಿದೆ.
.Nobel Peace Prize: ವೆನೆಜುವೆಲಾದ ಮಾರಿಯಾಗೆ ನೊಬೆಲ್ ಶಾಂತಿ ಪುರಸ್ಕಾರ.
ಟ್ರಂಪ್ಗೆ ನಿರಾಸೆ

‘ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ ತಮ್ಮನ್ನು ಆಯ್ಕೆ ಮಾಡಬೇಕು ಹಲವಾರು ಯುದ್ಧಗಳನ್ನು ನಿಲ್ಲಿಸಿದ್ದರಿಂದ ನಾನು ಈ ಪ್ರಶಸ್ತಿಗೆ ಅರ್ಹ’ ಎಂದೇ ಹೇಳುತ್ತಾ ಬಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಾಸೆ ಶುಕ್ರವಾರ ಈಡೇರಲಿಲ್ಲ ಈ ಪ್ರಶಸ್ತಿಯನ್ನು ಟ್ರಂಪ್ ಅವರಿಗೆ ನೀಡಬೇಕು ಎಂದು ರಿಪಬ್ಲಿಕನ್ ಪಕ್ಷದ ನಾಯಕರು ಕೂಡ ಒತ್ತಾಯಿಸುತ್ತಾ ಬಂದಿದ್ದರು.

‘ಆಪರೇಷನ್ ಸಿಂಧೂರ ವೇಳೆ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಾನು ನಿಲ್ಲಿಸಿದ್ದೆ’ ಎಂದು ಹಲವು ಬಾರಿ ಟ್ರಂಪ್ ಹೇಳಿಕೊಂಡಿದ್ದರು. ಟ್ರಂಪ್ ಈಗ ಎರಡನೇ ಬಾರಿ ಅಧ್ಯಕ್ಷ ಗಾದಿ ಏರಿದ್ದಾರೆ. ಕಳೆದ ಬಾರಿಯಂತೆ ಈ ಸಲವೂ ಅವರು ನೊಬೆಲ್ ಶಾಂತಿ ಪ್ರಶಸ್ತಿಯನ್ನು ತಮಗೇ ನೀಡಬೇಕು ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ನೊಬೆಲ್ ಸಮಿತಿಯು ತಮ್ಮನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಬಗ್ಗೆ ಟ್ರಂಪ್ ಸಂಶಯವನ್ನೂ ವ್ಯಕ್ತಪಡಿಸಿದ್ದರು.

‘ಅವರು ಏನು ಮಾಡಬೇಕೋ ಅದನ್ನೇ ಮಾಡಬೇಕಾಗುತ್ತದೆ. ಅವರು ಏನೇ ನಿರ್ಧಾರ ಕೈಗೊಂಡರೂ ಒಳ್ಳೆಯದು. ನೊಬೆಲ್ ಪ್ರಶಸ್ತಿಗಾಗಿಯೇ ನಾನು ಈ ಕಾರ್ಯ (ಅವರೇ ಹೇಳಿಕೊಂಡಂತೆ ಹಲವು ದೇಶಗಳ ನಡುವಿನ ಯುದ್ಧ ನಿಲ್ಲಿಸಿದ್ದು) ಮಾಡಲಿಲ್ಲ. ಜನರ ಪ್ರಾಣ ಉಳಿಸುವುದಕ್ಕಾಗಿ ನಾನು ಯುದ್ಧಗಳನ್ನು ನಿಲ್ಲಿಸಿದೆ’ ಎಂದು ಗುರುವಾರವಷ್ಟೆ ಹೇಳಿದ್ದರು.

ನೊಬೆಲ್ ಸಮಿತಿಗೆ ಶಾಂತಿ ಸ್ಥಾಪನೆಗಿಂತ ರಾಜಕೀಯವೇ ಮುಖ್ಯವಾಗಿರುವುದು ಸಾಬೀತಾಗಿದೆ. ಆದಾಗ್ಯೂ ಡೊನಾಲ್ಡ್ ಟ್ರಂಪ್ ಅವರು ಯುದ್ಧಗಳನ್ನು ನಿಲ್ಲಿಸುವುದು ಜನರ ಪ್ರಾಣ ಉಳಿಸುವುದನ್ನು ಮುಂದುವರಿಸುವರು
ಸ್ಟೀವನ್ ಚೆವುಂಗ್ ಶ್ವೇತಭವನ ವಕ್ತಾರ
.ಮಾರಿಯಾ ಕೊರಿನಾ ಮಚಾದೊಗೆ ಒಲಿದ ನೊಬೆಲ್ ಶಾಂತಿ ಪ್ರಶಸ್ತಿ: ಯಾರಿವರು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.