ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕೊರಿಯಾದ ಪ್ರತ್ಯೇಕ ಸ್ಥಾನಮಾನ ಬದಲಾಯಿಸಲು ಕರೆ ನೀಡಿದ ಕಿಮ್ ಜಾಂಗ್ ಉನ್‌

Published 16 ಜನವರಿ 2024, 2:28 IST
Last Updated 16 ಜನವರಿ 2024, 2:28 IST
ಅಕ್ಷರ ಗಾತ್ರ

ಸೋಲ್: ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್‌ ಅವರು ದಕ್ಷಿಣ ಕೊರಿಯಾದ ಪ್ರತ್ಯೇಕ ಸ್ಥಾನಮಾನವನ್ನು ಬದಲಾಯಿಸಲು ಸಾಂವಿಧಾನಿಕ ತಿದ್ದುಪಡಿಗೆ ಕರೆ ನೀಡಿದ್ದಾರೆ ಎಂದು ಕೊರಿಯಾ ಕೇಂದ್ರ ಸುದ್ದಿ ಸಂಸ್ಥೆ (ಕೆಸಿಎನ್‌ಎ) ವರದಿ ಮಾಡಿದೆ.

ಸೋಮವಾರ ಸಂಸತ್ತಿನಲ್ಲಿ ಮಾತನಾಡಿದ ಅವರು, ‘ನಮ್ಮ ದೇಶವು ಯುದ್ಧವನ್ನು ಬಯಸುವುದಿಲ್ಲ. ಆದರೆ, ಅದನ್ನು ತಪ್ಪಿಸುವ ಉದ್ದೇಶವಿಲ್ಲ. ದಕ್ಷಿಣ ಕೊರಿಯಾದೊಂದಿಗಿನ ಏಕೀಕರಣವು ಇನ್ನು ಮುಂದೆ ಸಾಧ್ಯವಿಲ್ಲ. ಇದೇ ನಮ್ಮ ಅಂತಿಮ ತೀರ್ಮಾನವಾಗಿದೆ’ ಎಂದು ಹೇಳಿದ್ದಾರೆ.

ಏಕೀಕರಣ ಮತ್ತು ಪ್ರವಾಸೋದ್ಯಮದೊಂದಿಗೆ ವ್ಯವಹರಿಸುವ ಮೂರು ಸಂಸ್ಥೆಗಳನ್ನು ಮುಚ್ಚಲು ಉತ್ತರ ಕೊರಿಯಾ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಕಿಮ್ ಜಾಂಗ್ ಉನ್‌ ನಿರ್ಧಾರದಿಂದ ಭವಿಷ್ಯದಲ್ಲಿ ನಡೆಯಬಹುದಾದ ಯುದ್ಧದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಪರಮಾಣು ಶಸ್ತ್ರಾಸ್ತ್ರಗಳನ್ನು ಸಮರ್ಪಕವಾಗಿ ಬಳಸಲು ಅನುಕೂಲವಾಗಲಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT