ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Operation Kaveri: ಸುಡಾನ್‌ನಿಂದ ಈವರೆಗೆ 530 ಭಾರತೀಯರ ಸ್ಥಳಾಂತರ

ಸುಡಾನ್‌ನಿಂದ ಭಾರತೀಯರ ರಕ್ಷಣೆಗೆ 'ಆಪರೇಷನ್ ಕಾವೇರಿ' ಕಾರ್ಯಾಚರಣೆ
Published 26 ಏಪ್ರಿಲ್ 2023, 5:10 IST
Last Updated 26 ಏಪ್ರಿಲ್ 2023, 5:10 IST
ಅಕ್ಷರ ಗಾತ್ರ

ನವದೆಹಲಿ: ಹಿಂಸಾಚಾರ ಪೀಡಿತ ಸುಡಾನ್‌ನಿಂದ ಈವರೆಗೆ 530 ಭಾರತೀಯರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ 'ಆಪರೇಷನ್ ಕಾವೇರಿ' ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿತ್ತು. ಇದರ ಬೆನ್ನಲ್ಲೇ ಭಾರತೀಯರನ್ನು ಕರೆತರಲು ನೌಕಾಪಡೆ ಹಾಗೂ ವಾಯುಪಡೆ ಜಂಟಿ ಕಾರ್ಯಾಚರಣೆ ಪ್ರಾರಂಭಿಸಿದೆ.

ಮೊದಲ ತಂಡದಲ್ಲಿ 278 ಜನರನ್ನು ಹೊತ್ತ ‘ಐಎನ್‌ಎಸ್‌ ಸುಮೇಧ’ ನೌಕೆಯು ಮಂಗಳವಾರ ಪೋರ್ಟ್‌ ಸುಡಾನ್‌ನಿಂದ ಸೌದಿ ಅರೇಬಿಯಾದ ಜಿದ್ದಾದತ್ತ ಹೊರಟಿತ್ತು.

ಮತ್ತೊಂದೆಡೆ ವಾಯುಪಡೆಯ C130J ವಿಮಾನದ ಮೂಲಕ 250 ಮಂದಿ ಭಾರತೀಯರನ್ನು ರಕ್ಷಿಸಲಾಗಿದೆ.

ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮಾಹಿತಿ ನೀಡಿದ್ದು, ಮೊದಲ ಸಿ-130ಜೆ ವಿಮಾನವು 121 ಮಂದಿ ಮತ್ತು ಎರಡನೇ ವಿಮಾನದ ಮೂಲಕ 135 ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಂಘರ್ಷ ಪೀಡಿತ ಸುಡಾನ್‌ನಲ್ಲಿ ಭಾರತೀಯರ ರಕ್ಷಣೆಗಾಗಿ ಕೇಂದ್ರ ಸರ್ಕಾರವು, ಸುಡಾನ್ ಆಡಳಿತದ ಹೊರತಾಗಿ ಭಾರತೀಯ ರಾಯಭಾರ, ಅಮೆರಿಕ, ಸೌದಿ ಅರೇಬಿಯಾ, ಯುಇಎ, ಈಜಿಪ್ಟ್ ಹಾಗೂ ವಿಶ್ವಸಂಸ್ಥೆಯ ಜೊತೆ ನಿರಂತರ ಸಂಪರ್ಕದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT