ಢಾಕಾ: ಬಲವಂತದ ನಾಪತ್ತೆ, ಚಿತ್ರಹಿಂಸೆ ಸೇರಿದಂತೆ ಹತ್ಯೆ ಪ್ರಕರಣಗಳಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಕೈವಾಡವಿದೆ ಎಂದು ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ರಚಿಸಿರುವ ತನಿಖಾ ಆಯೋಗವು ತಾತ್ಕಾಲಿಕ ವರದಿಯಲ್ಲಿ ತಿಳಿಸಿದೆ.

ಶೇಖ್ ಹಸೀನಾ ವಿರುದ್ಧ 3,500ಕ್ಕೂ ಹೆಚ್ಚು ಬಲವಂತದ ನಾಪತ್ತೆ ಪ್ರಕರಣಗಳು ಕೇಳಿಬಂದಿವೆ ಎಂದು ತನಿಖಾ ಆಯೋಗವು ವರದಿಯಲ್ಲಿ ಹೇಳಿದೆ.

‘ಶೇಖ್ ಹಸೀನಾ ಅವರು ಬಲವಂತದ ನಾಪತ್ತೆ ಪ್ರಕರಣಗಳಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂಬುದಕ್ಕೆ ಆಯೋಗವು ಪುರಾವೆಗಳನ್ನು ಕಂಡುಕೊಂಡಿದೆ’ ಎಂದು ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನುಸ್ ಅವರ ಮುಖ್ಯ ಸಲಹೆಗಾರರು (ಸಿಎ) ಪ್ರಕಟಣೆಯಲ್ಲಿ ತಿಳಿಸಿದೆ.

ಶೇಖ್ ಹಸೀನಾ ಆಡಳಿತಾವಧಿಯಲ್ಲಿದ್ದ ರಕ್ಷಣಾ ಸಲಹೆಗಾರ, ನಿವೃತ್ತ ಮೇಜರ್ ಜನರಲ್ ತಾರಿಕ್ ಅಹ್ಮದ್ ಸಿದ್ದಿಕ್, ರಾಷ್ಟ್ರೀಯ ದೂರಸಂಪರ್ಕ ವಿಭಾಗದ ಮಾಜಿ ಮಹಾನಿರ್ದೇಶಕ ಮತ್ತು ಮೇಜರ್ ಜನರಲ್ ಜಿಯಾವುಲ್ ಅಹ್ಸಾನ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಾದ ಮೊನಿರುಲ್ ಇಸ್ಲಾಂ ಮತ್ತು ಮೊಹಮ್ಮದ್ ರಶೀದ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳನ್ನು ವಜಾಗೊಳಿಸಿ ಎಂದು ಬಾಂಗ್ಲಾದ ಮಧ್ಯಂತರ ಸರ್ಕಾರ ಆದೇಶಿಸಿದೆ.
.ಬಾಂಗ್ಲಾದೇಶ | ಚಿನ್ಮಯ್ ಕೃಷ್ಣ ದಾಸ್ ಬಿಡುಗಡೆಗೆ ಶೇಖ್ ಹಸೀನಾ ಆಗ್ರಹ.ಬಾಂಗ್ಲಾದೇಶ | ಶೇಖ್ ಹಸೀನಾ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ ನ್ಯಾಯಮಂಡಳಿ.ಬಾಂಗ್ಲಾದೇಶ: ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಮತ್ತೆ 5 ಕೊಲೆ ಪ್ರಕರಣ ದಾಖಲು.ಶೇಖ್ ಹಸೀನಾ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದು ಮಾಡಲು ಬಾಂಗ್ಲಾ ಸರ್ಕಾರ ನಿರ್ಧಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.