ಪೇಶಾವರ: ಭಾರತ–ಚೀನಾ ಗಡಿ ಬಳಿಯ ಉತ್ತರ ಗಿಲ್ಗಿಟ್ ಬಾಲ್ಟಿಸ್ತಾನ್ ಬಳಿ ಪಾಕ್ ಸೇನೆಯ ಹೆಲಿಕಾಪ್ಟರ್ ಪತನಗೊಂಡು ಇಬ್ಬರು ಪೈಲಟ್ ಸೇರಿದಂತೆ ನಾಲ್ವರು ಮೃತರಾಗಿರುವ ಘಟನೆ ಸೋಮವಾರ ನಡೆದಿದೆ.

ಹೆಲಿಕಾಪ್ಟರ್ ಗಿಲ್ಗಿಟ್ನ ಹುದೂರ್ ವಾಯುನೆಲೆಯಿಂದ ಚೀಲಾಸ್ಗೆ ತೆರಳುತ್ತಿತ್ತು. ಮಾರ್ಗಮಧ್ಯೆ ತಾಂತ್ರಿಕ ಸಮಸ್ಯೆಯಿಂದ ಪತನವಾಗಿದೆ ಎಂದು ಪಾಕ್ ಸೇನೆಯ ವಕ್ತಾರರು ತಿಳಿಸಿದ್ದಾರೆ.

ಹೆಲಿಕಾಪ್ಟರ್ನಲ್ಲಿ ಸೇನೆಯ ಇಬ್ಬರು ಅಧಿಕಾರಿಗಳು ಇದ್ದರು, ಅವರೂ ಮೃತರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಘಟನೆ ನಡೆದಾಗ ಹೆಲಿಕಾಪ್ಟರ್ನಲ್ಲಿದ್ದ ಒಬ್ಬ ಯೋಧ ಪ್ಯಾರಾಚೂಟ್ ಸಹಾಯದಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
.ಚೀನಾ ಅಧ್ಯಕ್ಷರೊಂದಿಗೆ ಮಾತುಕತೆ; ಗಡಿಯಾಚೆಗಿನ ಭಯೋತ್ಪಾದನೆ ಕುರಿತು ಭಾರತ ಕಳವಳ.ಚೀನಾ ಪ್ರವಾಸಕ್ಕೂ ಮುನ್ನ ಹೊಸ ಕ್ಷಿಪಣಿ ಪರಿಶೀಲಿಸಿದ ಕೊರಿಯಾ ಸರ್ವಾಧಿಕಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.