ಇಸ್ಲಾಮಾಬಾದ್ (ಪಿಟಿಐ): ಚೀನಾ– ಪಾಕಿಸ್ತಾನ ಆರ್ಥಿಕ ಕಾರಿಡಾರ್ನ (ಸಿ–ಪೆಕ್) ಯೋಜನೆಯಡಿಯಲ್ಲಿ ಎರಡನೇ ಹಂತದ ರೈಲು ಯೋಜನೆಯನ್ನು 7 ಬಿಲಿಯನ್ ಡಾಲರ್ (₹61,707.83 ಕೋಟಿ) ವೆಚ್ಚದಲ್ಲಿ ಕೈಗೊಳ್ಳಲು ಉಭಯ ರಾಷ್ಟ್ರಗಳು ಒಪ್ಪಂದ ಮಾಡಿಕೊಂಡಿವೆ.

ಈ ಕುರಿತಂತೆ ಮಾಹಿತಿ ನೀಡಿದ ಪಾಕಿಸ್ತಾನದ ಯೋಜನೆ ಹಾಗೂ ಅಭಿವೃದ್ಧಿ ಸಚಿವ ಅಹ್ಸಾನ್ ಇಕ್ಬಾಲ್, ‘ಪ್ರಧಾನಿ ಶೆಹಬಾಜ್ ಷರೀಫ್ ಅವರು ಇತ್ತೀಚಿಗೆ ಚೀನಾಕ್ಕೆ ಭೇಟಿ ನೀಡಿದ ವೇಳೆ ಒಕ್ಕೂಟ ಹಣಕಾಸು ಪಾಲುದಾರಿಕೆ ಮಾಡಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ. ಇದರನ್ವಯ, ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ), ಏಷ್ಯನ್ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ (ಎಐಐಬಿ) ಸಂಸ್ಥೆಯು ಹಣಕಾಸು ನೆರವು ನೀಡಲಿದೆ’ ಎಂದು ತಿಳಿಸಿದ್ದಾರೆ.

ಚೀನಾವು ರೈಲು ಯೋಜನೆಗೆ ಮಾತ್ರ ನೆರವು ನೀಡದೇ, ಕಾರಕೋರಂ ಹೆದ್ದಾರಿ ನಿರ್ಮಾಣಕ್ಕೂ ಹಣಕಾಸು ನೆರವು ಒದಗಿಸಲಿದೆ ಎಂದು ಇಕ್ಬಾಲ್ ತಿಳಿಸಿದ್ದಾರೆ ಎಂದು ’ಡಾನ್’ ನ್ಯೂಸ್ ಪೇಪರ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.