ಪೆಶಾವರ: ಪಾಕಿಸ್ತಾನದ ಪೆಶಾವರದಲ್ಲಿರುವ ಅರೆಸೇನಾ ಪಡೆಯ ಪ್ರಧಾನ ಕಚೇರಿಯಲ್ಲಿ ಸೋಮವಾರ ನಡೆದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ ಮೂವರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫೆಡರಲ್ ಕಾನ್ಸ್ಟಾಬ್ಯುಲರಿ (ಎಫ್.ಸಿ) ಪ್ರಧಾನ ಕಚೇರಿಗೆ ನುಗ್ಗಲು ಯತ್ನಿಸಿದ ಮೂವರು ಆತ್ಮಹತ್ಯಾ ಬಾಂಬರ್ಗಳು ಸಹ ಪ್ರತಿದಾಳಿಯಲ್ಲಿ ಮೃತರಾಗಿದ್ದಾರೆ ಎಂದು ನಗರ ಪೊಲೀಸ್ ಮುಖ್ಯಸ್ಥ ಮಿಯಾನ್ ಸಯೀದ್ ತಿಳಿಸಿದ್ದಾರೆ.

‘ಒಬ್ಬ ದಾಳಿಕೋರ ಮುಖ್ಯ ದ್ವಾರದಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡರೆ, ಇನ್ನಿಬ್ಬರು ಆವರಣ ಪ್ರವೇಶಿಸಿದರು. ಎಫ್.ಸಿ ಸಿಬ್ಬಂದಿ ಅವರನ್ನು ಹೊಡೆದುರುಳಿಸಿದರು ಮತ್ತು ಇಬ್ಬರೂ ಸ್ಥಳದಲ್ಲೇ ಮೃತಪಟ್ಟರು’ ಎಂದು ಸಯೀದ್ ಹೇಳಿದ್ದಾರೆ.

‘ಎಫ್.ಸಿ ಪ್ರಧಾನ ಕಚೇರಿಯ ಮುಖ್ಯ ದ್ವಾರದಲ್ಲಿ ಮತ್ತು ಆವರಣದೊಳಗಿನ ಬೈಕ್ ಸ್ಟ್ಯಾಂಡ್ ಬಳಿ ಆತ್ಮಹತ್ಯಾ ಸ್ಫೋಟಗಳು ಸಂಭವಿಸಿವೆ’ ಎಂದು ಖೈಬರ್ ಪಖ್ತುಂಖ್ವಾ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಜುಲ್ಫಿಕರ್ ಹಮೀದ್ ಹೇಳಿದ್ದಾರೆ.

ದಾಳಿಯಲ್ಲಿ ಮೂವರು ನಾಗರಿಕರು ಸೇರಿದಂತೆ ಐದು ಜನರು ಗಾಯಗೊಂಡಿದ್ದಾರೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.